ಮಂಡ್ಯ: ಬಿಜೆಪಿ ಸರ್ಕಾರ ಗೊಂದಲದ ನೀತಿ ಅನುಸರಿಸುತ್ತಿದೆ. ನೈಟ್ ಕರ್ಫ್ಯೂ ಜಾರಿ ಮಾಡಿ, ಮತ್ತೆ ಆದೇಶ ಹಿಂದೆ ಪಡೆಯುತ್ತಾರೆ ಎಂದು ಮಂಡ್ಯದಲ್ಲಿ ಜೆಡಿಎಸ್ ಶಾಸಕ ಕೆ.ಸುರೇಶ್ ಗೌಡ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರ ಯಾವಾಗ ಕರ್ಫ್ಯೂ ಜಾರಿ ಮಾಡುತ್ತೆ ಅಥವಾ ಬಿಡುತ್ತೆ ಅಂತ ಗೊತ್ತಿಲ್ಲ. ಆದರೆ ಸಿಎಂ ಯಡಿಯೂರಪ್ಪ ಬೆಳಿಗ್ಗೆ ಒಂದು, ಮದ್ಯಾಹ್ನ ಒಂದೊಂದು ರೀತಿ ಘೋಷಣೆ ಮಾಡುತ್ತಾರೆ. ಒಬ್ಬರು ವಾಪಸ್ ಪಡೆಯುತ್ತಾರೆ. ಇನ್ನೊಬ್ಬರು ಟೈಮ್ ಹೇಳುತ್ತಾರೆ. ಇನ್ನೊಬ್ಬರು ಬಂದು ಒಂದು ಗಂಟೆ ಮುಂದೆ ಹಾಕುತ್ತಾರೆ. ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂದು ನಮಗೆ ಏನು ಗೊತ್ತಾಗುತ್ತಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಅವಶ್ಯಕತೆ ಇದ್ದಾಗ ನಿರ್ಧಾರಗಳನ್ನು ಸ್ಪಷ್ಟವಾಗಿ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಹುಚ್ಚು-ಹುಚ್ಚು ರೀತಿ ಕರ್ಫ್ಯೂ ಜಾರಿ ಮಾಡಬಾರದು. ರಾಜ್ಯದಲ್ಲಿ ನೈಟ್ ಕರ್ಫ್ಯೂ ಏಕೆ ಬೇಕು ಎಂದು ಪ್ರಶ್ನೇ ಮಾಡಿದ್ದಾರೆ.
KSRTC ಬಸ್ ಓಡಾಡುತ್ತೆ ಅಂತಾರೆ, ಮತ್ತೆ ನೈಟ್ ಕರ್ಫ್ಯೂ ಅಂತಾರೆ. ಮತ್ತೊಂದೆಡೆ ನ್ಯೂ ಇಯರ್ಗೆ ಪಾರ್ಟಿ ಮಾಡಲು ಅವಕಾಶ ಕೊಡುತ್ತಾರೆ. ಇದು ಒಂಥರ ಎಡಬಿಡಂಗಿತರ ಇದೆ, ಏನಾಗುತ್ತಿದೆ ಅಂತ ಅರ್ಥ ಆಗುತ್ತಿಲ್ಲ. ಕೊರೋನಾ ರೂಪಾಂತರ ಕಂಟ್ರೋಲ್ ಮಾಡುವುದು ಸರ್ಕಾರದ ಕರ್ತವ್ಯ. ತಜ್ಞರ ಸಲಹೆ ಪಡೆದು ಆಮೇಲೆ ನಿರ್ಧಾರ ತೆಗೆದುಕೊಳ್ಳಬೇಕು. ಈ ರೀತಿ ನಿರ್ಧಾರಗಳು ಜನರನ್ನು ಗೊಂದಲಕ್ಕೆ ಎಡೆಮಾಡಿಕೊಡುತ್ತದೆ ಎಂದು ಶಾಸಕ ಕೆ.ಸುರೇಶ್ ಗೌಡ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಳಿ ನಡೆಸಿದ್ದಾರೆ.