ಬೆಂಗಳೂರು: ನಡು ರಸ್ತೆಯಲ್ಲಿ ರಾಕ್ಷಸನಂತೆ ಪ್ರೇಮಿಯ ಮೇಲೆ ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಹುಬ್ಬಳಿಯಲ್ಲಿ ನಡೆದಿದೆ.
ಕುಂದಗೋಳ ತಾಲೂಕಿನ ಕುಂಕುರ ಗ್ರಾಮದ ನಿವಾಸಿಯಾದ ಇಮ್ತಿಯಾಜ್ ಆಟೋ ಚಾಲಕನಾಗಿದ್ದನು. ದೇಶಪಾಂಡೆ ನಗರದ ಯುವತಿ. ಇಮ್ತಿಯಾಜ್ ಆಟೋ ಚಾಲಕನಾಗಿದ್ದ, ಯುವತಿಯು ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಇವರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು.
ನಡು ರಸ್ತೆಯಲೇ ಯುವತಿಯ ಕುತ್ತಿಗೆಗೆ ಮಚ್ಚಿನಿಂದ ಮೂರು ಬಾರಿ ಕೊಚ್ಚಿದ್ದಾನೆ. ಸ್ಥಳದಲ್ಲಿ ಇದ್ದ ಪ್ರತ್ಯಕ್ಷದರ್ಶಿ ಮಂಜುನಾಥ ಯುವತಿಯನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ.