Monday, February 3, 2025

ಇನ್ಸ್ಪೆಕ್ಟ್ ರ್​ ನರೇಂದ್ರ ಕುಮಾರ್ ಹೆಸರಲ್ಲಿ ಕರೆ ಮಾಡಿ ಹಣ ವಸೂಲಿ ಮಾಡುತ್ತಿದ್ದ ವಂಚಕ ಅರೆಸ್ಟ್..!

ಬೆಂಗಳೂರು: ಸಹಾಯ ಮಾಡುತ್ತೇನೆ ಎಂದು ಯುವಕನೊಬ್ಬನಿಗೆ ಲಕ್ಷ,ಲಕ್ಷ ಹಣ ದೊಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಣ ವಸೂಲಿ ಮಾಡುತ್ತಿದ್ದ ವಂಚಕನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಹಾವೇರಿ ಮೂಲದ ಯುವಕ ಅರ್ಶದ ಕೆಲಸ ಮಾಡುತ್ತಿದ್ದ. ಗ್ರಾಹಕನಾಗಿ ಬಂದ ಸ್ವರೂಪ್ ಶೆಟ್ಟಿ, ಅರ್ಶದ್ ಮನೆಯ ಸಮಸ್ಯೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡು ನಿನಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದ. ನಾನು ಸಹಾಯ ಮಾಡುವುದು ಯಾರಿಗೂ ಹೇಳಬೇಡ ಎಂದಿದ್ದ. ಅರ್ಶದ್ ಜೊತೆ ಕೇರಳ ಮೂಲದ ಓರ್ವ ಸ್ವಾಮೀಜಿ ಬಗ್ಗೆ ಮಾತಾಡಿದ್ದನು.

ಸ್ವಾಮೀಜಿ ನಿನ್ನ ಕಷ್ಠಕ್ಕೆ 24 ಲಕ್ಷ ರೂ. ಹಣ ಹಾಕಿದ್ದಾರೆ ಎಂದು ಅಕೌಂಟ್ ಗೆ ಹಣ ಹೋಗಿದ್ದ ಎಡಿಟ್ ಮಾಡಲಾಗಿದ್ದ ಮೇಸೆಜ್ ಒಂದನ್ನು ಅರ್ಶದ್ ಗೆ ತೋರಿಸಿದ್ದನು.  ನಂತರ ಹಣಕ್ಕೆ ಟ್ಯಾಕ್ಸ್ ಕಟ್ಟಬೇಕು ಎಂದು ಅರ್ಶದ್ ಬಳಿ ಐದು ಲಕ್ಷಕ್ಕೂ ಹೆಚ್ಚು ಹಣ ಪಡೆದುಕೊಂಡಿದ್ದ. ಆದರೆ ಅರ್ಶದ್ ಅಕೌಂಟ್ ಗೆ ಹಣ ಬಂದಿರಲಿಲ್ಲ.

ನಂತರ ಅರ್ಶದ್ ಕುಟುಂಬದವರಿಗೆ ಕರೆ ಮಾಡಿ ಮಾವ ರಫಿ ಎಂಬುವವರಿಗೂ  ಸ್ವಾಮೀಜಿ ಬಗ್ಗೆ ಕಥೆ ಹೇಳಿದ್ದನು. ಆದರೆ ಪ್ರಶ್ನೇ ಮಾಡಿದಾಗ ಮತ್ತೆ ಹಣವನ್ನು ತಾನೇ ಕೊಡುವುದಾಗಿ ಹೇಳಿದ್ದನು.

ತಾನು ವಾಸವಿರುವ ಅಪಾರ್ಟ್ ಮೆಂಟ್ ಗೆ ಅರ್ಶದ್ ನನ್ನು ಕರೆಸಿಕೊಂಡು  ಮೂರು ತಿಂಗಳು ಅಕ್ರಮ ಬಂಧನದಲ್ಲಿ ಇಟ್ಟು ಹಿಂಸೆ ನೀಡುತ್ತಿದ್ದನು. ಮೂರು ತಿಂಗಳವರೆಗೆ ಪೊಲೀಸ್ ರಂತೆ ಕರೆ ಮಾಡಿ ಬೆದರಿಕೆಯನ್ನು ಹಾಕುತ್ತಿದ್ದನು. ಇನ್ಸ್ಪೆಕ್ಟ್ ರ್​ ನರೇಂದ್ರ ಕುಮಾರ್ ಹೆಸರಲ್ಲಿ ಕರೆ ಮಾಡಿ ಹಣ ವಸೂಲಿ ಮಾಡುತ್ತಿದ್ದ. ಇದುವರೆಗೆ ಒಟ್ಟು ಬರೋಬ್ಬರಿ 48 ಲಕ್ಷ ಹಣವನ್ನು ವಸೂಲಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಅರ್ಶದ್ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಿದ್ದ, ಆರೋಪಿ ಸ್ವರೂಪ್ ನ ವಿಕೃತ ವರ್ತನೆ ಕ್ಯಾಮರದಲ್ಲಿ ಸೆರೆಯಾಗಿದೆ. ಪ್ಲಾಟ್ ನಲ್ಲೇ ಗಾಂಜಾ ಡ್ರಗ್ಸ್ ಸೇವನೆ ಮಾಡುತ್ತಿದ್ದ, ಸ್ವರೂಪ್ ಗಾಂಜಾ ಸೇದುತ್ತಿರುವ ವಿಡಿಯೋ ಲಭ್ಯವಾಗಿದ್ದು, ಕಾಡುಗೋಡಿ ಪೊಲಿಸರು ಆರೋಪಿ ಸ್ವರೂಪ್ ನನ್ನು ಬಂಧಿಸಿದ್ದಾರೆ.

RELATED ARTICLES

Related Articles

TRENDING ARTICLES