ಬೆಂಗಳೂರು: ಕಳೆದ ಎಂಟು ತಿಂಗಳಿನಿಂದ ಕಿಲ್ಲರ ಕೊರೋನಾ ರಾಜ್ಯದಲ್ಲಿ ತನ್ನ ಅಟ್ಟಹಾಸವನ್ನು ಮುಂದುವರೆಸಿತ್ತು. ಈ ಹಿನ್ನಲೆಯಲ್ಲಿ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈ ಹಿಂದೆ ಮೆಟ್ರೋ ತನ್ನ ಸಂಚಾರವನ್ನು ಪುನರಾರಂಭಿಸಿದರೂ ಕೋಟಿ-ಕೋಟಿ ನಷ್ಟ ಉಂಟಾಗಿದೆ.
ಕಳೆದ 6 ತಿಂಗಳಗಲ ಕಾಳ ಸಂಪೂರ್ಣವಾಗಿ ಮೆಟ್ರೋ ಸಂಚಾರವನ್ನು ಬಂದ್ ಮಾಡಿತ್ತು. ಆದರೆ ಕೇಂದ್ರದ ಮಾರ್ಗಸೂಚಿಯಂತೆ 400 ಮಂದಿಗೆ ಪ್ರಯಾಣ ಮಾಡಲು ಅವಕಾಶ ನೀಡಿತ್ತು. ಸದ್ಯ ಮೆಟ್ರೋದಲ್ಲಿ ಒಂದು ಬಾರಿಗೆ 400 ಜನರು ಪ್ರಯಾಣ ಮಾಡುತ್ತಿದ್ದಾರೆ. ಕೋವಿಡ್ ಮಾರ್ಗಸೂಚಿ ಅನುಸರಿಸುತ್ತಿದ್ದರೂ ಪ್ರಯಾಣಿಕರು ಮೆಟ್ರೋಗೆ ಬರದ ಹಿನ್ನಲೆ ಕೋಟಿ- ಕೋಟಿ ಹಣ ನಷ್ಟವನ್ನು ಅನುಭವಿಸುವಂತಾಗಿದೆ. 8 ತಿಂಗಳಲ್ಲಿ ಬರೋಬ್ಬರಿ ಮೇಟ್ರೋ 184 ಕೋಟಿ ರೂ. ನಷ್ಟ ಉಂಟಾಗಿದೆ.