Saturday, June 15, 2024

ಗ್ರಾ.ಪಂ ಚುನಾವಣೆ ಅಖಾಡಕ್ಕೆ ತಾ.ಪಂ ಸದಸ್ಯೆ..!

ದಾವಣಗೆರೆ: ತಾಲ್ಲೂಕು ಪಂಚಾಯಿತಿಯಲ್ಲಿ ಅನುದಾನ ಕೊರತೆ ಹಿನ್ನಲೆ, ಹಾಲಿ ತಾಲ್ಲೂಕು ಪಂಚಾಯಿತಿ ಸದಸ್ಯೆಯೋರ್ವರು ಗ್ರಾಮ ಪಂಚಾಯಿತಿ ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಟ್ಟ ಅಪರೂಪದ ಸನ್ನಿವೇಶ ನಡೆದಿದೆ..

ತಾ.ಪಂ ನಲ್ಲಿ ಅನುದಾನ ಕೊರತೆ ಹಿನ್ನಲೆ ದಾವಣಗೆರೆ ತಾಲೂಕು ಅಣಬೇರು ಪಂಚಾಯ್ತಿಯ ಹಾಲಿ ತಾ.ಪಂ ಸದಸ್ಯೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷೆಯೂ ಆಗಿರುವ ಮಂಜುಳಾ ಶಿವಮೂರ್ತಿ ಗ್ರಾ.ಪಂ ಗೆ ಸ್ಪರ್ಧಿಸಿದ್ದಾರೆ.. ನಾಲ್ಕೈದು ಹಳ್ಳಿ ವ್ಯಾಪ್ತಿ ಇರುವ ತಾ.ಪಂ ನಲ್ಲಿ ವರ್ಷಕ್ಕೆ ಕೇವಲ ಆರೇಳು ಲಕ್ಷ ಅನುದಾನ ಬರುತ್ತೆ, ಇದರಲ್ಲಿ ಅಭಿವೃದ್ದಿ ಕೆಲಸ ಅಸಾಧ್ಯ, ಆದರೆ ಗ್ರಾ.ಪಂ ನಲ್ಲಿ ಉತ್ತಮ‌ ಅನುದಾನದಿಂದ ಗ್ರಾಮ ಅಭಿವೃದ್ದಿ ಸಾಧ್ಯ ಎಂದು ಗ್ರಾ.ಪಂ ಸ್ಪರ್ಧಿಸಿರುವುದಾಗಿ ಮಂಜುಳಾ ತಿಳಿಸಿದ್ದಾರೆ.. ಇನ್ನೂ ಪತ್ನಿಯ ಜೊತೆಗೆ ಪತಿ ಅಣಬೇರು ಶಿವಮೂರ್ತಿ ಸಹ ಮತ್ತೊಂದು ವಾರ್ಡಗೆ ಸ್ಪರ್ಧೆ ನಡೆಸಿದ್ದು, ಕಳೆದ ಚುನಾವಣೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ ಗ್ರಾಪಂ ಚುನಾವಣೆ ಗೆ ಸ್ಪರ್ಧಿಸಿ ನಂತರ ಗ್ರಾಪಂ ಅಧ್ಯಕ್ಷರಾಗಿದ್ದರು.

RELATED ARTICLES

Related Articles

TRENDING ARTICLES