ಬೆಂಗಳೂರು: ಬೆಂಗಳೂರಿನ ಸಿಐಡಿ ಡಿವೈಎಸ್ ಪಿ ಲಕ್ಷ್ಮೀ (33) ನೇಣು ಬಿಗಿದುಕೊಂಡು ಅನ್ನಪೂರ್ಣೇಶ್ವರಿ ನಗರದ ಲೇಔಟ್ ನಲ್ಲಿ ಆತ್ಮಹತ್ಯಗೆ ಶರಣಾಗಿದ್ದಾರೆ.
ನಿನ್ನೆ ರಾತ್ರಿ ಲಕ್ಷ್ಮೀ ಅನ್ನಪೂರ್ನೇಶ್ವರಿ ನಗರದ ವಿನಾಯಕ ಲೇಔಟ್ ನ ಗೆಳೆಯರ ಮನೆಯಲ್ಲಿ ರಾತ್ರಿ 10 ಗಂಟೆವರೆಗೂ ಪಾರ್ಟಿಗೆ ಮಾಡಿದ್ದಾರೆ. 10ಗಂಟೆ ನಂತರ ಡೋರ್ ಲಾಕ್ ಮಾಡಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷ್ಮೀ ಆತ್ಮಹತ್ಯೆ ಸಾಕಷ್ಟು ಅನುಮಾನ ಮೂಡಿಸಿದೆ. ಸದ್ಯ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. 10 ಗಂಟೆ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ.
ಲಕ್ಷ್ಮೀ 2014ರ ಬ್ಯಾಚ್ ನ ಕೆಪಿಎಸ್ ಸಿ ಅಧಿಕಾರಿಯಾಗಿದ್ದರು. 2017ರಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಕರ್ತವ್ಯಕ್ಕೆ ಹಾಜರಾಗುವ ಮುನ್ನ ಲಕ್ಷ್ಮೀ 2012 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ 8 ವರ್ಷವಾದರೂ ಮಕ್ಕಳಾಗಿರಲ್ಲ. ಹೀಗಾಗಿ ಮಾನಸಿಕ ಖಿನ್ನತೆಗೆ ಒಳಾಗಾಗಿ ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಪ್ರತ್ನಿಸಿದ್ದರು.
ಕಳೆದ ಎರಡು ವರ್ಷಗಳಿಂದ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ಬೆಂಗಳೂರು ಬಿಟ್ಟು ಹೈದ್ರಾಬಾದ್ ನಲ್ಲಿ ವಾಸವಾಗಿದ್ದ ಲಕ್ಷ್ಮೀ ಪತಿ. ಕಳೆದ ಮೂರು ದಿನಗಳ ಹಿಂದೆ ಪ್ಲಾಟ್ ಗೆ ಬಂದು ಹೋಗಿದ್ದ ಲಕ್ಷ್ಮೀ ಪತಿ. ಸಂಸಾರಿಕ ಸಂಕಷ್ಠದಿಂದ ಮದ್ಯಪಾನಕ್ಕೆ ಲಕ್ಷ್ಮೀ ದಾಸರಾಗಿದ್ದರು. ಈ ಹಿಂದೆ ಖಿನ್ನತೆ ಕೌನ್ಸಲಿಂಗ್ ಗೆ ಒಳಗಾಗಿದ್ದರು. ಮುಂದೆ ಮದ್ಯಪಾನ ಮಾಡಬಾರದು ಎಂದು ವೈದ್ಯರು ತಿಳಿಸಿದ್ದರು.