ಕೊಪ್ಪಳ: ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ 2017,18,19ನೇ ಸಾಲಿನ PRED ಯೊಜನೆ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ. ಬೊಗಸ್ ಕಾಮಗಾರಿ ನಡೆಸಿ ಬಿಲ್ ತೆಗೆದುಕೊಂಡ ಅಧಿಕಾರಿಗಳು. ಭ್ರಷ್ಟಾಚಾರವನ್ನು ಕುಷ್ಟಗಿ ತಾಲೂಕಿನ ಯುವಕರು ಬಯಲಿಗೆಳದಿದ್ದಾರೆ.
ಕುಷ್ಠಗಿಯಲ್ಲಿ ಪಿ.ಆರ್.ಇ.ಡಿ ಇಂಜಿನಿಯರ್ ಇಲಿಯಾಸ್ ಕೆಲಸ ಮಾಡದೇ ಮೂರುವರೆ ಕೋಟಿ ರೂ. ಅನುದಾನ ಕಾಮಗಾರಿಗಳ ಪುಕ್ಕಟೆ ಬೆಲ್ ಪಡೆದುಕೊಂಡಿದ್ದಾರೆ. ಭ್ರಷ್ಟಾಚಾರದಲ್ಲಿ ಕೊಪ್ಪಳ ಜಿಲ್ಲೆಯ ಜಿಲ್ಲಾ ಪಂಚಾಯತ್ ಇಇ ರಂಗಯ್ಯ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಕುಷ್ಟಗಿ ತಾಲೂಕಿನ ಯುವಕರು ಆರೋಪಿಸಿದ್ದಾರೆ.
ಕಳೆದು ಎರಡು ಮೂರು ವರ್ಷಗಳಿಂದ ಕಳಪೆ ಕಾಮಗಾರಿ ವಿರುದ್ಧ ಹೋರಾಟ ನಡೆಸುತ್ತಿದ್ದರು, ಕೊಪ್ಪಳ ಜಿ.ಪಂ.ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು ಯುವಕರು ಆರೋಪಿಸಿದ್ದಾರೆ.