Monday, November 25, 2024

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರುಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ ಶಾರದ, ಒಬ್ಬ ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ

ಕೊರೋನಾ ಸೋಂಕಿಗೆ ಒಳಗಾಗಿದ್ದ ಅಪ್ಪಾಜಿ ಗೌಡ, ತಮ್ಮ ನಿವಾಸದಲ್ಲಿಯೇ, ಕ್ವಾರಂಟೈನ್ ಆಗಿದ್ದರು. ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು.

ಇನ್ನು ಹಿಂದೆ 2 ಬಾರಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅಪ್ಪಾಜಿ ಗೌಡರು, ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಅವರಿಗೆ ತೀವ್ರ ಕೆಮ್ಮು ಕೂಡ ಇತ್ತು ಎಂದು ಹೇಳಲಾಗಿದೆ. ನಡುವೆ ಇವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಹಿನ್ನೆಲೆಯಲ್ಲಿ, ಅವರಿಗೆ ನಗರದ 2 ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲು ಕರೆತರಲಾಗಿತ್ತಾದರೂ, ಅಲ್ಲಿ ವೆಂಟಿಲೇಟರ್ ಸಿಗದ ಕಾರಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ಫಲಕಾರಿಯಾಗಿಲ್ಲ

 1994 ರಿಂದ 1999 ರವರೆಗೆ 1999 ರಿಂದ 2004 ರವರೆಗೆ ಹಾಗೂ 2013 ರಿಂದ 2016 ರವರೆಗೆ ಮೂರು ಬಾರಿ ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಆನಂತರ ನಡೆದ 2018 ವಿಧಾನಸಭಾ ಚುನಾವಣೆಯಲ್ಲಿ ಇವರ ರಾಜಕೀಯ ಬದ್ಧ ವೈರಿ ಕಾಂಗ್ರೆಸ್ ಬಿ.ಕೆ. ಸಂಗಮೇಶ್ ವಿರುದ್ಧ ಪರಾಭವಗೊಂಡಿದ್ದರು. ಬಿ.. ವ್ಯಾಸಂಗ ಮಾಡಿದ್ದ ಅಪ್ಪಾಜಿ ಗೌಡರು, ಕಾಲೇಜು ಸಮಯದಲ್ಲಿ, ಕೋಕೋ ಆಟಗಾರನಾಗಿದ್ದರು.

ಇನ್ನು ಭದ್ರಾವತಿಯ ವಿ..ಎಸ್.ಎಲ್. ಕಾರ್ಖಾನೆಯ ನೌಕರರಾಗಿದ್ದ ಅಪ್ಪಾಜಿಗೌಡರು, ವೇಳೆ, ಕಾರ್ಮಿಕ ಸಂಘಟನೆಯ ಮುಂದಾಳತ್ವ ವಹಿಸಿಕೊಂಡಿದ್ದರು. ಆನಂತರದಲ್ಲಿ, ರಾಜಕೀಯಕ್ಕೆ ಸಕ್ರಿಯವಾಗಿ ಎಂಟ್ರಿ ಕೊಟ್ಟಿದ್ದರು. ನಂತರ 1994 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಭದ್ರಾವತಿಯ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ 1999 ರಲ್ಲಿ ಕಾಂಗ್ರೆಸ್ ನಿಂದ ಎಂ.ಎಲ್.. ಯಾಗಿ ಆಯ್ಕೆಯಾಗಿದ್ದ ಅಪ್ಪಾಜಿ ಗೌಡರು, ನಂತರ 2013 ಚುನಾವಣೆಯಲ್ಲಿ, ಜೆಡಿಎಸ್ ನಿಂದ ಸ್ಪರ್ಧಿಸಿ ಗೆಲುವು ಕಂಡಿದ್ದು, ನಂತರ 2018 ರಲ್ಲಿ ಪರಾಭವಗೊಂಡಿದ್ದರು

RELATED ARTICLES

Related Articles

TRENDING ARTICLES