ಹುಬ್ಬಳ್ಳಿ : ಡ್ರಗ್ಸ್ ಇಂದೊಂದು ನಿರಂತರವಾದ ಜಾಲವಾಗಿದೆ ಎಂದು ಜಿಲ್ಲೆಯ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ. ಬೆಂಗಳೂರಿನ ಸಿಸಿಬಿಯವರು ನಿರಂತರವಾಗಿ ದಾಳಿ ನಡೆಸಿ ಜಾಲ ಭೇದಿಸುತ್ತಿದ್ದಾರೆ. ಬೆಂಗಳೂರು ಹೊರತುಪಡಿಸಿ ವಿವಿಧ ಪಟ್ಟಣಗಳಲ್ಲೂ ಸಹ ಡ್ರಗ್ಸ್ ಮಾಫಿಯಾ ಇದೆ. ರಾಜ್ಯಕ್ಕೆ ಆಂಧ್ರಪ್ರದೇಶ ಹಾಗೂ ಗೋವಾದಿಂದ ಡ್ರಗ್ಸ್ ಸಪೈ ಆಗುತ್ತಿದೆ. ಅದನ್ನ ಮಟ್ಟ ಹಾಕಲು ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ಹಾಗೂ ಸಿಸಿಬಿಯವರು ಸಧ್ಯಕ್ಕೆ ತನಿಖೆ ನಡೆಸುತ್ತಿದ್ದಾರೆ.
ತನಿಖೆ ಒಂದು ಹಂತಕ್ಕೆ ತಲುಪಿದ ನಂತರ ಹೆಸರು ಹಾಗೂ ವಿವರಗಳನ್ನ ಬಹಿರಂಗ ಪಡಿಸಬಹುದು.
ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗಳ ಕೊರತೆಯಿದೆ. ಸಿಬ್ಬಂದಿಗಳ ಕೊರತೆಯನ್ನ ಜೀರೋ ಲೇವಲ್ ಮಾಡಲು ನೇಮಕಾತಿ ಸಹ ನಡೆಯಿತ್ತಿದೆ. ಕೊರೋನಾ ನಂತರ ಅಪರಾಧ ಚಟುವಟಿಕೆಗಳು ಹೆಚ್ಚಳವಾಗುವ ಸಾಧ್ಯತೆಯಿದೆ. ಪೊಲೀಸರು ಸಹ ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ.
ಡಯಲ್ 100 ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಆಕ್ಟಿವ್ ಆಗಬೇಕಿದೆ. ಹುಬ್ಬಳ್ಳಿ ಧಾರವಾಡದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಳವಾಗುತ%