ಶಿವಮೊಗ್ಗ : ರಾಜ್ಯದಲ್ಲಿ, ದೇಶದಲ್ಲಿ ಜನರು ಹುಳಗಳಂತೆ ಸಾಯುತ್ತಿದ್ದಾರೆ. ನಾನು ಕೈ ಮುಗಿದು ಪ್ರಾರ್ಥನೆ ಮಾಡಿಕೊಳ್ಳುತ್ತೆನೆ. ದಯಮಾಡಿ ಮಾಸ್ಕ್ ನ್ನು ಸರಿಯಾಗಿ ಧರಿಸಿ ಅಂತಾ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಇಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎಸ್.ಎಸ್. ಜ್ಯೋತಿ ಪ್ರಕಾಶ್ ಅಧಿಕಾರ ಸ್ವೀಕಾರ ಸಮಾರಂಭದ ವೇಳೆ, ನೆರೆದಿದ್ದವರಿಗೆ ಗದರಿ ಹೇಳಿದರು. ಇದೇ ರೀತಿ ನೀವು ಮಾಸ್ಕ್ ಸರಿಯಾಗಿ ಹಾಕಿಕೊಳ್ಳದೇ ಇದ್ದರೆ, ನೀವು ಕೊರೋನಾ ರೋಗ ಬರಿಸಿಕೊಳ್ಳುತ್ತಿರಿ, ನಿಮ್ಮ ಪಕ್ಕದಲ್ಲಿ ಇರುವವರಿಗೂ ಬರಿಸುತ್ತಿರಿ. ನೀವು ಗುಂಪಲ್ಲಿ ಸೇರೋದು ಮೋದಿಯವರು ಒಪ್ಪಲ್ಲ. ಮಾಸ್ಕ್ ಸರಿಯಾಗಿ ಧರಿಸಿಲ್ಲವೆಂದರೆ, ನಿಮ್ಮ ಪಕ್ಕದಲ್ಲಿರುವ ನಾಲ್ವರು ಆಸ್ಪತ್ರೆಗೆ ಹೋಗ್ತಾರೆ. ಅದರಲ್ಲಿ ಒಬ್ಬರು ಸಾಯುತ್ತಾರೆ. ವಿಧಿಯಿಲ್ಲ ಸಂತೋಷದ ಸಭೆಯಲ್ಲಿ ಸೇರಿಕೊಂಡಿದ್ದಿರಾ. ಕೈ ಮುಗಿದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಮಾಸ್ಕ್ ಧರಿಸಿ, ಜಿಲ್ಲೆಯಲ್ಲಿ, ರಾಜ್ಯದಲ್ಲಿ, ದೇಶದಲ್ಲಿ ಜನರು ಹುಳಗಳಂತೆ ಸಾಯುತ್ತಿದ್ದಾರೆ. ನಾವು ಬಹಳ ವರ್ಷ ಬದುಕಬೇಕು. ನಮ್ಮನ್ನು ನಂಬಿಕೊಂಡ ಕುಟುಂಬ ನೋಡಿಕೊಳ್ಳಬೇಕಿದೆ ಅಂತಾ ಮನವಿ ಮಾಡಿಕೊಂಡರು.
ಇದೇ ವೇಳೆ ಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದ ಅವರು, ನಾವುಗಳು ಬಹಳ ಓಡಾಡುತ್ತಿದ್ದೆವೆ, ಪತ್ನಿಯ ಮಾತು ಮೀರಿ ನಾವೆಲ್ಲರೂ ಓಡಾಡುತ್ತಿದ್ದೆವೆ. ನಾನು ಕೂಡ ಬೆಂಗಳೂರಿನಿಂದ ಬಂದಿದ್ದೇನೆ ಎಂದ ಈಶ್ವರಪ್ಪ, ವೇದಿಕೆಯಲ್ಲಿ ಉಪಸ್ಥಿತರಿದ್ದ ಎಂ.ಎಲ್.ಸಿ. ಆಯನೂರು ಮಂಜುನಾಥ್ ಮತ್ತು ಜ್ಯೋತಿಪ್ರಕಾಶ್ ಅವರಿಗೆ ಹೆಂಡತಿ ಮಾತು ಕೇಳುತ್ತೀರಾ ಅಂತಾ ಪ್ರಶ್ನಿಸಿದ್ರು. ಅದಕ್ಕೆ ನಾನಂತೂ ಕೇಳ್ತಿನಿ ಅಂತಾ ಆಯನೂರು ಮಂಜುನಾಥ್ ಹೇಳಿದ್ದೆ ತಡ, ನೀವು ನೂರಕ್ಕೆ ನೂರು ಸುಳ್ಳು ಹೇಳುತ್ತಿದ್ದಿರಾ. ನನ್ನೂ ಸೇರಿ, ಪ್ರಪಂಚದಲ್ಲಿ ಯಾರೂ ಕೂಡ ಹೆಂಡತಿ ಮಾತು ಕೇಳಲ್ಲ ಅಂತಾ ಹಾಸ್ಯ ಚಟಾಕಿ ಹಾರಿಸಿದ್ರು. ಈ ವೇಳೆ ಸಭೆಯಲ್ಲಿದ್ದವರು ನಗೆಗಡಲಲ್ಲಿ ತೇಲಿದರು.
ಇನ್ನು ಕಾರ್ಯಕ್ರಮದಲ್ಲಿ, ನೂತನ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್ ಗೆ ಕಿವಿ ಮಾತು ಹೇಳಿದ ಈಶ್ವರಪ್ಪ, ಸಂಘಟನೆ ಇಲ್ಲದೇ ಇದ್ದರೆ, ನಾನಾಗ್ಲೀ, ನೀವಾಗ್ಲೀ, ಯಡ್ಯೂರಪ್ಪ ಆಗ್ಲೀ ಈ ಸ್ಥಾನಕ್ಕೆ ಬರುತ್ತಿರಲಿಲ್ಲ. ಜ್ಯೋತಿಪ್ರಕಾಶ್ ಮತ್ತು ತಂಡದವರು, ಸಂಘಟನೆಗೆ ಒತ್ತು ನೀಡಿ ಕೆಲಸ ಮಾಡಿ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ರು.