Wednesday, January 22, 2025

ಸಮಗ್ರ ಅಭಿವೃದ್ಧಿಗಾಗಿ ವಾಟಾಳ್ ಚಾಪೆ ಮೇಲೆ ಮಲಗಿ ಪ್ರತಿಭಟನೆ!

ಹುಬ್ಬಳ್ಳಿ : ಉತ್ತರ ಕರ್ನಾಟಕ ಸಮಗ್ರ ಅಭಿವೃದ್ದಿಗಾಗಿ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಗರದ ಚೆನ್ನಮ್ಮ ವೃತ್ತದಲ್ಲಿ ಚಾಪೆಯ ಮೇಲೆ ಮಲಗುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ದಿ ಮರೆತಿವೆ ಎಂದು ಕಿಡಿಕಾರಿದರು.

ಕಳೆದ ವರ್ಷ ಸಂಭವಿಸಿದ ಅತಿವೃಷ್ಠಿ ಅನಾವೃಷ್ಠಿಯ ಪರಿಹಾರ ಜನಗಳಿಗೆ ಇನ್ನೂ ತಲುಪಿಲ್ಲ. ಉತ್ತರ ಕರ್ನಾಟಕ ಭಾಗವನ್ನು ಸರ್ಕಾರಗಳು ಕಡೆಗಣನೆ ಮಾಡುತ್ತಿವೆ‌‌. ಉತ್ತರ ಕರ್ನಾಟಕ ಭಾಗದಲ್ಲಿ ಹೆಸರಿಗೆ ಮಾತ್ರ ಸುವರ್ಣ ಸೌಧ ಕಟ್ಟಲಾಗಿದೆ.‌ ಮುಂದಿನ ದಿನಗಳಲ್ಲಿ ಅದನ್ನು ಸರ್ಕಾರ ಮಾರಾಟ ಮಾಡಲು ಹಿಂದೇಟು ಹಾಕುವುದಿಲ್ಲ. ಹೀಗಾಗಿ ಬೆಳಗಾವಿ ಸುವರ್ಣಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರದಿಂದ ಉತ್ತರ ಕರ್ನಾಟಕದ ಅಭಿವೃದ್ದಿಗಾಗಿ 25 ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉತ್ತರ ಕರ್ನಾಟಕಕ್ಕೆ ಆಗಮಿಸಬೇಕು. ಇಲ್ಲಿನ ಜನರ ಸಮಸ್ಯೆಗಳನ್ನ ಪರಿಶೀಲನೆ ಮಾಡಬೇಕು.  ಸಿ.ಎಂ ಯಡಿಯೂರಪ್ಪ ಅವರು ಕೇವಲ ವೈಮಾನಿಕ ಸಮೀಕ್ಷೆ ಮಾಡದೇ ಕೆಳಗಿಳಿದು ಸಮೀಕ್ಷೆ ಮಾಡಬೇಕು. ಶೀಘ್ರವೇ ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ದಿಗಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

RELATED ARTICLES

Related Articles

TRENDING ARTICLES