Monday, June 3, 2024

ಗಾಲ್ಫ್ ಕ್ರೀಡಾಪಟು ಅದಿತಿ ಅಶೋಕ್ ಗುಡ್ಲಮನಿಗೆ ‘ಅರ್ಜುನ ಪ್ರಶಸ್ತಿ’ ಪುರಸ್ಕಾರ..!

ಬಾಗಲಕೋಟೆ : ಇದೇ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜಮಖಂಡಿಯ ಕುವರಿ ಅಂತಾರಾಷ್ಟ್ರೀಯ ಗಾಲ್ಫ್ ಕ್ರೀಡಾಪಟು ಅದಿತಿ ಅಶೋಕ್ ಗುಡ್ಲಮನಿ ಅರ್ಜುನ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಲಭಿಸಿದಕ್ಕೆ ಅದಿತಿ ಕುಟುಂಬಸ್ಥರು ಸೇರಿದಂತೆ ಜಮಖಂಡಿ ಜನತೆಯಲ್ಲಿ ಸಂತಸ ಮೂಡಿದೆ.

ಭಾರತೀಯ ಕ್ರೀಡಾ ಸಚಿವಾಲಯ ಕ್ರೀಡಾ ಸಾಧಕರಿಗೆ ಕೊಡಲ್ಪಡುವ ಅರ್ಜುನ್ ಪ್ರಶಸ್ತಿ ಸೇರಿದಂತೆ ನಾಗರಿಕ ಪ್ರಶಸ್ತಿ ಪ್ರಕಟಿಸಿದೆ. ಹೀಗಾಗಿ ಕಳೆದ 2016ರಲ್ಲಿ ನಡೆದ ಒಲಿಂ

ಪಿಕ್ಸ್ ಕ್ರೀಡಾಕೂಟದ ಗಾಲ್ಫ್ ಕ್ರೀಡಾ ವಿಭಾಗದಲ್ಲಿ ಭಾರತ ದೇಶವನ್ನು ಅದಿತಿ ಪ್ರತಿನಿಧಿಸಿ, ಅತ್ಯುತ್ತಮ ಸಾಧನೆ ತೋರಿದ್ದರು. ಇನ್ನು ಗಾಲ್ಫ್ ಕ್ರೀಡೆಯಲ್ಲಿ ಯುರೋಪ್​ನಲ್ಲಿ ಯಶಸ್ಸುಗಳಿಸಿದ ದೇಶದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ಹೆಮ್ಮೆಯಿದೆ.

ಸದ್ಯ ಅದಿತಿ ಕುಟುಂಬಸ್ಥರು, ಬೆಂಗಳೂರಿನಲ್ಲಿ ವಾಸವಾಗಿದ್ದು,ಅವರ ಸಂಬಂಧಿಕರು ಜಮಖಂಡಿಯಲ್ಲಿದ್ದಾರೆ. ಮೂಲತ: ಜಮಖಂಡಿಯವರಾಗಿರುವ ಅಂತಾರಾಷ್ಟ್ರೀಯ ಗಾಲ್ಫ್ ಕ್ರೀಡಾಪಟು ಅದಿತಿ ಅಶೋಕ್ ಅವರ ಬಗ್ಗೆ ಜಮಖಂಡಿ ಜನತೆಗೆ ಎಲ್ಲಿಲ್ಲದ ಅಭಿಮಾನ. ಕಳೆದ 2016ರಲ್ಲೂ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಗಾಲ್ಫ್ ಕ್ರೀಡಾ ವಿಭಾಗದಲ್ಲಿ ಭಾರತ ದೇಶ ಪ್ರತಿನಿಧಿಸಿದಕ್ಕೆ ನಗರದಾದ್ಯಂತ ಬ್ಯಾನರ್ ಹಾಕುವ ಮೂಲಕ ಅಭಿಮಾನ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಅದಿತಿ ಅಶೋಕ್ ಗುಡ್ಲಮನಿ ಕ್ರೀಡಾ ಸಾಧನೆಗೆ ಅತ್ಯುನ್ನತ ಅರ್ಜುನ್ ಪ್ರಶಸ್ತಿ ಲಭಿಸಿದಕ್ಕೆ ಸಂಭ್ರಮವೋ ಸಂಭ್ರಮ.

ಅಂತರಾಷ್ಟ್ರೀಯ ಗಾಲ್ಫ್ ಕ್ರೀಡಾಪಟು ಅದಿತಿ ಕೇಂದ್ರ ಸರ್ಕಾರ ನೀಡುವ ಪ್ರಸ್ತುತ ಸಾಲಿನ ಅರ್ಜುನ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ತಿಳಿಸಲು ಹೆಮ್ಮೆಯ ಸಂಗತಿ, ಎಂದು ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಗಾಲ್ಫ್ ಕ್ರೀಡಾಪಟು ಅದಿತಿ ಅಶೋಕ್ ಗುಡ್ಲಮನಿ ಅವರಿಗೆ ಅರ್ಜುನ್ ಪ್ರಶಸ್ತಿ ಲಭಿಸುವದರೊಂದಿಗೆ ರಾಜ್ಯ, ಬಾಗಲಕೋಟೆ ಜಿಲ್ಲೆ ಕೀರ್ತಿ ಹೆಚ್ಚಿಸಿದ್ದಾರೆ.

RELATED ARTICLES

Related Articles

TRENDING ARTICLES