Wednesday, January 22, 2025

ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿರುವ ಡಿ.ಕೆ ಶಿವಕುಮಾರ್

ಬೆಂಗಳೂರು: ಬಿಎಸ್​ವೈ ಗೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ನಾಳೆಯಿಂದ ಎರಡು ದಿನಗಳ ಕಾಲ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಆ.25 ರಂದು ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಸಿಎಂ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.  ನಾಳೆ ಬೆಳಗ್ಗೆ 7.45ಕ್ಕೆ ಬೆಳಗಾವಿಗೆ ತೆರಳಲಿದ್ದಾರೆ.​ ಬೆಳಗ್ಗೆ 11 ಗಂಟೆಗೆ ಗೋಕಾಕ್, ಬಳಿಕ ಅರಭಾವಿ ಕ್ಷೇತ್ರದಲ್ಲಿ ಪರಿಶೀಲನೆ ನಡೆಸಲಿದ್ದು, ನಂತರ ಸಂಜೆ 4 ಗಂಟೆಗೆ ಘಟಪ್ರಭಾದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ ಬೆಳಗಾವಿ ನಗರ, ಗ್ರಾಮಾಂತರ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್​​​ ಸಮಿತಿ ಸಭೆ ನಡೆಯಲಿದೆ. ಹಾಗೇ ಮಂಗಳವಾರ ಜಮಖಂಡಿ, ಮುಧೋಳ, ಬಾದಾಮಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಮಂಗಳವಾರ ರಾತ್ರಿ ಹುಬ್ಬಳ್ಳಿಯಲ್ಲಿ ತಂಗಲಿದ್ದು, ಬುಧವಾರ ಬೆಂಗಳೂರಿಗೆ ವಾಪಸ್​ ಬರಲಾಗುವುದು ಎಂದು ಪ್ಲಾನ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES