ಚಿತ್ರದುರ್ಗ: ಪವರ್ ಟಿವಿ ವರದಿಗೆ ಎಚ್ಚತ್ತ ಜಿಲ್ಲಾಡಳಿತ ಹೋರಿ ಕದ್ದವನನ್ನು ಕತ್ತೆ ಮೇಲೆ ಕೂರಿಸಿ ಬೆತ್ತಲೆ ಮೆರವಣಿಗೆ ಮಾಡಿ ಚಿತ್ರಹಿಂಸೆ ನೀಡಿದ್ದ ಗ್ರಾಮಸ್ಥರ ವಿರುದ್ದ ಪ್ರಕರಣ ದಾಖಲಿಸಿಕೊಂಡು 09 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ.
ದನ ಕದಿಯಲು ಬಂದವನಿಗೆ ಬೆತ್ತಲೆ ಮೆರವಣಿಗೆ ..!
ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸರಸ್ವತಿ ಹಟ್ಟಿಯಲ್ಲಿ ಹೋರಿಗಳನ್ನು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ವ್ಯಕ್ತಿಗೆ ಸರಸ್ಪತಿಹಟ್ಟಿ ಮತ್ತು ಕೆರೆಮುಂದಲಹಟ್ಟಿ ಗ್ರಾಮಸ್ಥರು ಈಶ್ವರ್ ಎಂಬ ಆರೋಪಿಯನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಿ, ಕಟಿಂಗ್ ಪ್ಲೇಯರ್ ಬಳಸಿ ಚಿತ್ರ ಹಿಂಸೆ ನೀಡಿ, ಕತ್ತೆ ಮೇಲೆ ಕೂರಿಸಿ ಊರೆಲ್ಲಾ ಮರವಣಿಗೆ ಮಾಡಿ ಅಮಾನವೀಯತೆ ಮೆರೆದಿದ್ದರು, ಇದಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ನಿಮ್ಮ ಪವರ್ ಟಿವಿ ಪ್ರಸಾರ ಮಾಡಿ ಸಂಬಂಧಪಟ್ಟವರ ಗಮನಕ್ಕೆ ತಂದಿತ್ತು. ಈ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿತ್ತು. ಕೂಡಲೆ ಕಾರ್ಯ ಪ್ರವೃತ್ತರಾದ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಪೊಲೀಸರಿಗೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಮೌಖಿಕ ಆದೇಶ ನೀಡಿದ್ರು, ಅದರಂತೆ ಆರೋಪಿ ಈಶ್ವರ್ ನಿಂದ ದೂರು ಪಡೆದ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು, ಅಮಾನವೀಯತೆ ಮೆರೆದಿದ್ದ ಗುಂಡಜ್ಜರ ಮೇಣಪ್ಪ, ಕರಿಯಪ್ಪ, ಕಿಟ್ಟಪ್ಪ, ರಾಮಣ್ಣ, ಜಯಪ್ಪ, ಬಾಲಪ್ಪ ಮತ್ತು ಇತರರ ಮೇಲೆ ಐಪಿಸಿ ಕಲಂ 143, 147, 323, 355 504, 506, 149 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.