Monday, December 23, 2024

ಕೊರೋನಾಂತಕದ ನಡುವೆ ವಿಘ್ನ ನಿವಾರಕನ ಆಗಮನಕ್ಕೆ ಭರ್ಜರಿ ತಯಾರಿ.!

ಶಿವಮೊಗ್ಗ: ಇನ್ನು ನಾಡಿನೆಲ್ಲೆಡೆ ಗೌರಿ-ಗಣಪತಿ ಹಬ್ಬದ ಸಡಗರ, ಸಂಭ್ರಮ ಮನೆ ಮಾಡಿದೆ. ಅದರಂತೆ ಇಂದು ಗೌರಿ ಹಬ್ಬ ಆಚರಿಸಲಾಗುತ್ತಿದ್ದರೆ. ನಾಳೆ ಶನಿವಾರದಂದು, ವಿಘ್ನ ನಿವಾರಕನಾಗಿರುವ ದೇವ ಗಣಪನ ಹಬ್ಬ, ನಾಡಿನೆಲ್ಲೆಡೆ ವಿಜೃಂಭಣೆಯಿಂದ ನಡೆಸಲು ಎಲ್ಲಾ ಅಗತ್ಯ ತಯಾರಿ ನಡೆಸಲಾಗುತ್ತಿದೆ.

ದೇವಾಲಯಗಳಲ್ಲಿ ಮನೆ-ಮನೆಗಳಲ್ಲಿ, ರಸ್ತೆಯ ಇಕ್ಕೆಲಗಳಲ್ಲಿ, ಗಣೇಶನನ್ನು, ಪ್ರತಿಷ್ಟಾಪಿಸಿ ಅತ್ಯಂತ ಸಡಗರ ಸಂಭ್ರಮದಿಂದ ಪೂಜಿಸಲು ಎಲ್ರೂ ಅಣಿಯಾಗುತ್ತಿದ್ದಾರೆ. ಕೊರೋನಾ ಕಾಟದಿಂದಾಗಿ, ಈ ಬಾರಿ ಹಬ್ಬಕ್ಕೆ ಹೆಚ್ಚು ಮಹತ್ವ ಸಿಗದೇ, ಗಣಪತಿ ಮೂರ್ತಿ ತಯಾರಕರು ಕಂಗಾಲಾಗಿದ್ದಾರೆ. ಆದರೂ ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಜೋರಾಗಿದೆ. ಹೂವು,ಹಣ್ಣು, ತರಕಾರಿ, ಬಾಳೆ ಕಂದು ವ್ಯಾಪಾರ ಜೋರಾಗಿ ಸಾಗಿದೆ. ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಬಾಳೆ ಎಲೆ, ಬಾಳೆ ದಿಂಡಿನ ಮಾರಾಟ ಜಾಸ್ತಿಯಾಗಿದೆ. ಅಗತ್ಯವಸ್ತುಗಳ ಬೆಲೆ ಗಗನೇಕ್ಕಿರಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ, ಕೊರೋನಾ ಸೋಂಕು ಭೀತಿ ಇದ್ದರೂ ಕೂಡ, ಶಿವಮೊಗ್ಗದಲ್ಲಿ ಹಬ್ಬದ ವಾತಾವರಣ ನಿಧಾನಗತಿಯಲ್ಲಿ ವೇಗ ಪಡೆಯುತ್ತಿದೆ. ಮನೆ-ಮನೆಯಲ್ಲಿ ಹೆಂಗಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಗಣಪತಿ ಹಬ್ಬವನ್ನು ಭಕ್ತಿ ಪೂರ್ವಕವಾಗಿ ಮತ್ತು ವೈವಿಧ್ಯತೆಯಿಂದ ಆಚರಿಸಲು ಸಜ್ಜಾಗುತ್ತಿದ್ದಾರೆ. ನಗರದ ನೆಹರೂ ರಸ್ತೆ, ಬಿ.ಹೆಚ್. ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ಜನದಟ್ಟಣೆ ಇಂದು ಹೆಚ್ಚಾಗಿತ್ತು. ನಗರದ ಬಹುತೇಕ ಪ್ರಮುಖ ವೃತ್ತಗಳಲ್ಲಿ ಜನರು ಬೇವಿನ ಸೊಪ್ಪು, ಬಾಳೆ ಎಲೆ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಒಟ್ಟಿನಲ್ಲಿ, ಶ್ರಾವಣ ಮಾಸದ ಅಂತ್ಯದಲ್ಲಿ, ಬರುವ ಗೌರಿ ಸುತ, ಗಣಪನ ಹಬ್ಬಕ್ಕೆ ನಾಡಿನಾದ್ಯಂತ ಅಲ್ಲದೇ, ಪ್ರಪಂಚದಾದ್ಯಂತ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತಿದೆ. ಕೊರೋನಾಂತಕದ ನಡುವೆಯೂ, ಜಿಲ್ಲಾಡಳಿತದ ಹಲವಾರು ನಿರ್ಬಂಧಗಳ ನಡುವೆಯೂ, ಈ ಹಬ್ಬವನ್ನು ವಿಶೇಷವಾಗಿ ಮತ್ತು ವಿಭಿನ್ನವಾಗಿ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ.

RELATED ARTICLES

Related Articles

TRENDING ARTICLES