Wednesday, January 22, 2025

ಧೋನಿಗೆ ಪತ್ರ ಬರೆದ ಮೋದಿ..! ಆ ಪತ್ರದಲ್ಲಿ ಏನಿದೆ ಗೊತ್ತಾ?

ಟೀಮ್ ಇಂಡಿಯಾ  ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸ್ವಾತಂತ್ರ್ಯ ದಿನಾಚರಣೆಯಂದು ಅಂತಾರಾಷ್ಟ್ರೀಯ ಕ್ರಿಕೆಟ್​​​ಗೆ ನಿವೃತ್ತಿ ಘೋಷಿಸಿದ್ದಾರೆ. ಧೋನಿ ಭಾರತೀಯ ಕ್ರಿಕೆಟಿಗೆ ಮಾತ್ರವಲ್ಲದೆ ಇಡೀ ವಿಶ್ವ ಕ್ರಿಕೆಟ್​ಗೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಧೋನಿಯ ಸಾಧನೆ ಕೊಂಡಾಡದೇ ಇರೋರೇ ಇಲ್ಲ..! ಇದೀಗ ಪ್ರಧಾನಿ ನರೇಂದ್ರ ಮೋದಿ ಪತ್ರದ ಮೂಲಕ ಧೋನಿ ಸಾಧನೆ ಬಗ್ಗೆ ಮಾತನಾಡಿದ್ದಾರೆ..

“ಡಿಯರ್​ ಮಹೇಂದ್ರ, ಆಗಸ್ಟ್​ 15ರಂದು ನೀವು ವಿಶೇಷ ಶೈಲಿಯಲ್ಲಿ ದೇಶದ ಜನ ಭಾವೋದ್ರೇಕಕ್ಕೆ ಒಳಗಾಗುವಂಥಾ ವಿಡಿಯೋ ಶೇರ್​ ಮಾಡಿದ್ದೀರಿ. 130 ಕೋಟಿ ಭಾರತೀಯರು ನಿಮ್ಮ ನಿರ್ಧಾರದಿಂದ ನಿರಾಶೆಗೊಂಡಿದ್ದಾರೆ. ಆದರೆ ಭಾರತೀಯ ಕ್ರಿಕೆಟ್‌ಗಾಗಿ ನೀವು ಮಾಡಿರುವ ಸಾಧನೆಗೆ ಪ್ರತಿಯೊಬ್ಬರೂ ಕೃತಜ್ಞರಾಗಿರುತ್ತಾರೆ.

ನಿಮ್ಮ ಹೆಸರು ಚರಿತ್ರೆಯ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು. ಒಬ್ಬ ಅದ್ಭುತ ನಾಯಕ, ಬ್ಯಾಟ್ಸ್‌ಮನ್ ಮತ್ತು ವಿಕೆಟ್​ ಕೀಪರ್​ ಆಗಿ ನಿಮ್ಮ ಸಾಧನೆಯನ್ನು ಎಲ್ಲರೂ ಮೆಚ್ಚಲೇ ಬೇಕು.   2011 ವಿಶ್ವಕಪ್​ ಫೈನಲ್​​ನಲ್ಲಿ ನಿಮ್ಮ ಬ್ಯಾಟಿಂಗ್​ ಪ್ರದರ್ಶನ ಬಹಳ ಅದ್ಭುತವಾಗಿತ್ತು.

ಪುಟ್ಟ ಹಳ್ಳಿಯಿಂದ ಬಂದು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡು ಭಾರತ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದೀರಿ. 2007ರ ಟಿ-20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ತೋರಿರುವ ಪ್ರದರ್ಶನ ಹೆಮ್ಮೆ ತರುವಂಥದ್ದು.

ನಿಮ್ಮ ನಿವೃತ್ತಿ ಸಮಯದಲ್ಲಿ ಸಾಕ್ಷಿ ಹಾಗೂ ಮಗಳು ಜೀವಾ ನಿಮ್ಮೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದಾರೆ ಎಂಬ ವಿಶ್ವಾಸವಿದೆ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ” ಅಂತ ಮೋದಿ ಧೋನಿಯ ಗುಣಗಾನ ಮಾಡಿ ಶುಭಹಾರೈಸಿದ್ದಾರೆ.

RELATED ARTICLES

Related Articles

TRENDING ARTICLES