IPL ಶೀರ್ಷಿಕೆ ಪ್ರಾಯೋಜಕತ್ವ Dream 11 ಪಾಲಾಗಿದೆ. ಚೀನಾ ಮೂಲದ VIVO ಪ್ರಾಯೋಜಕತ್ವದ ವಿರುದ್ಧ ಅಭಿಮಾನಿಗಳು ಅಭಿಯಾನ ಆರಂಭಿಸಿದ್ದರಿಂದ ಬಿಸಿಸಿಐ ಆ ಸಂಸ್ಥೆಯ ಪ್ರಾಯೋಜಕತ್ವವನ್ನು ರದ್ದು ಮಾಡಿತ್ತು.
ಐಪಿಎಲ್ 2020ಗೆ 45 ದಿನಗಳು ಬಾಕಿ ಇರುವಾಗ VIVO ಪ್ರಾಯೋಜಕತ್ವ ಕಳೆದುಕೊಂಡಿದ್ದರಿಂದ ಬಿಡ್ ಕರೆಯಲಾಗಿತ್ತು. ಪತಂಜಲಿ, ಟಾಟಾ ಸನ್ಸ್, ಬೈಜುಸ್, ಅನಕಾಡೆಮಿ ಸೇರಿದಂತೆ ಹತ್ತಾರು ಪ್ರತಿಷ್ಠಿತ ಕಂಪನಿಗಳು ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಪೈಪೋಟಿಗಿಳಿದಿದ್ದವು. ಎಲ್ಲಾ ಕಂಪನಿಗಳನ್ನು ಬಿಡ್ನಲ್ಲಿ ಹಿಂದಿಕ್ಕಿ ಡ್ರೀಮ್ 11 ಪ್ರಾಯೋಜಕತ್ವ ಪಡೆದಿದೆ. ಬರೋಬ್ಬರಿ 222 ಕೋಟಿ ರೂಗಳಿಗೆ ಡ್ರೀಮ್ 11 ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ತನ್ನದಾಗಿಸಿಕೊಂಡಿದೆ.
ಇದು ಐಪಿಎಲ್ 2020ಗೆ ಮಾತ್ರ ಸೀಮಿತವಾಗಿದ್ದು, 2021 -2022ಕ್ಕೆ ಡ್ರೀಮ್ 11 ಶೀರ್ಷಿಕೆ ಪ್ರಾಯೋಜಕತ್ವವನ್ನು ನಿರಾಕರಿಸಿದೆ.