ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸಿಕ್ಸರ್ ಸಿಡಿಸಿ ಅದೆಷ್ಟೋ ಮ್ಯಾಚ್ಗಳನ್ನು ಭಾರತ ಗೆಲ್ಲುವಂತೆ ಮಾಡಿದ್ದಾರೆ. ಅಂಥಾ ವಿನ್ನಿಂಗ್ ಸಿಕ್ಸರ್ಗಳಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2011ರ ವರ್ಲ್ಡ್ ಕಪ್ ಫೈನಲ್ನಲ್ಲಿ ಬಾರಿಸಿದ್ದ ಸಿಕ್ಸರ್ ಯಾರೂ ಮರೆಯಲಾಗಲ್ಲ. ಆ ಸಿಕ್ಸರೊಂದಿಗೆ ಭಾರತ ಶ್ರೀಲಂಕಾ ವಿರುದ್ಧ ಗೆದ್ದು ಬೀಗಿತ್ತು, ಆ ಮೂಲ ಚಾಂಪಿಯನ್ ಪಟ್ಟ ಅಲಂಕರಿಸಿತ್ತು!
ಧೋನಿ ಬಾರಿಸಿದ್ದ ಆ ಸಿಕ್ಸರ್ಗೆ ಅಪರೂಪದ ಗೌರವ ಕೊಡಲು ಮುಂಬೈನ ವಾಂಖೆಡೆ ಸ್ಟೇಡಿಯಂ ಮುಂದಾಗಿದೆ! ಧೋನಿ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ನಿವೃತ್ತಿ ಪಡೆದ ಬೆನ್ನಲ್ಲೇ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ)ಯ ಅಪೆಕ್ಸ್ ಕಮಿಟಿ ಸದಸ್ಯ ಅಜಿಂಕ್ಯ ನಾಯ್ಕ್,, 2011ರ ವರ್ಲ್ಡ್ಕಪ್ ಫೈನಲ್ನಲ್ಲಿ ಧೋನಿ ಬಾರಿಸಿದ್ದ ಸಿಕ್ಸರ್ ಬೀಳುತ್ತಿದ್ದ ಆಸನವನ್ನು ಗುರುತಿಸಿ, ಅದಕ್ಕೆ ಧೋನಿ ಹೆಸರನ್ನಿಡುವ ಕುರಿತು ಪ್ರಸ್ತಾಪಿಸಿದ್ದು, ಎಂಸಿಎ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬರಲಿದೆ ಅಂತ ವರದಿಯಾಗಿದೆ.