Monday, December 23, 2024

ಕಾಂಗ್ರೆಸ್ ಮುಖಂಡೆ ಮಗಳು ನೇಣಿಗೆ ಶರಣು..!

ಚಿಕ್ಕಬಳ್ಳಾಪುರ: ಜಿಲ್ಲೆಯ ಕಾಂಗ್ರೆಸ್ ಮುಖಂಡೆ ಮಮತಾಮೂರ್ತಿ ಮಗಳು ನಿಹಾರಿಕಾ (19) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದ ಪ್ರಶಾಂತ ನಗರದ ಮನೆಯಲ್ಲಿ ನಡೆದಿದೆ.

ಮೃತ ಯುವತಿ ತಾಯಿ ಕಾಂಗ್ರೆಸ್ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದು ತಂದೆ ಡಾ.ವೆಂಕಟೇಶ್ ಮೂರ್ತಿ ಶಿಡ್ಲಘಟ್ಟ ತಾಲ್ಲೂಕು ಆರೋಗ್ಯಾಧಿಕಾರಿಯಾಗಿದ್ದಾರೆ. ನಿಹಾರಿಕಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 90 ರಷ್ಟು ಅಂಕ ಪಡೆದು ಉತ್ತೀರ್ಣರಾಗಿದ್ದರು. ಆದರೆ ಸಿಇಟಿ ಪರೀಕ್ಷೆಯಲ್ಲಿ ಕಡಿಮೆ ಬರಬಹುದು ಎಂಬ ಆತಂಕದಿಂದ ಮನೆಯಲ್ಲಿ ನಿಹಾರಿಕಾ ಮತ್ತು ಪೋಷಕರ ಜೊತೆ ವಾಗ್ವಾದ ನಡೆದಿತ್ತೆನ್ನಲಾಗಿದೆ. ಇದಲ್ಲದೇ ನಿಹಾರಿಕಾ ಸ್ನೇಹಿತರು ಕೂಡ ನೀನು ಅಂದುಕೊಂಡ ಡಾಕ್ಟರ್ ಕನಸು ಈಡೇರೋದು ಕಷ್ಟ ಎಂಬುದಾಗಿ‌ ಮಾತಾಡಿದ್ದಾರಂದು ಹೇಳಲಾಗಿದೆ. ಇದರಿಂದ ಮನನೊಂದ ನಿಹಾರಿಕಾ ಓದಿಕೊಳ್ಳುವುದಾಗಿ ಹೇಳಿ ರೂಂಗೆ ಹೋಗಿ ಚಿಲಕ ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದು ಬಂದಿದೆ.

ತಂದೆ ಡಾ.ವೆಂಕಟೇಶಮೂರ್ತಿ ಶಿಡ್ಲಘಟ್ಟ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಕೊರೋನಾ ಸಂಕಷ್ಟದ ಸಮಯದಲ್ಲಿ ಮನೆಗೂ ಹೋಗದೇ ದಕ್ಷ, ಪ್ರಮಾಣಿಕತೆಯಿಂದ ಕರ್ತವ್ಯದಲ್ಲಿ ತೊಡಗಿದ್ದರು. ಅಲ್ಲದೇ ತಿರುಪತಿ ಪ್ರಯಾಣ ಬೆಳಸಿ ತನ್ನ ಮುದ್ದಿನ ಮಗಳ ಪ್ರೀತಿಯ ತಿರುಪತಿ ಲಾಡು ತರುತ್ತಿರುವುದಾಗಿ ಹೇಳಲು ಪೋನ್ ಮಾಡಿದಾಗ ಮಗಳು ಪೋನ್ ತೆಗೆದಿಲ್ಲ. ಇದರಿಂದ ಪತ್ನಿ ಮಮತಾ ಮೂರ್ತಿಗೆ ಪೋನ್ ಮಾಡಿದ ಮಮತಾ ಮೂರ್ತಿ ರೂಂ ಬಾಗಿಲು ತಟ್ಟಿದಾಗ ಚಿಲಕ ‌ಹಾಕಲಾಗಿತ್ತು. ಬಳಿಕ ಬಲವಾಗಿ ಹೊಡೆದು ಬಾಗಿಲು ತೆರದು ನೋಡಿದಾಗ ಮಗಳು ನೇಣಿಗೆ ಶರಣಾಗಿರೋದು ಗೊತ್ತಾಗಿದೆ. ಈ 
ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES