Tuesday, December 24, 2024

ಜಮೀನು ವಿವಾದದಲ್ಲಿ ವ್ಯಕ್ತಿ ಸಾವು

ಬಳ್ಳಾರಿ : ಕೊಟ್ಟೂರಿನಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ವೆಂಕಟೇಶ್(44) ಮೃತ.

ಕೆಲದಿನಗಳ ಹಿಂದೆ ಶಂಬುನಾಥ್ ಎಂಬಾತ  ವೆಂಕಟೇಶ್​ ಅವರ ಜಮೀನು ಖರೀದಿ ಮಾತುಕತೆ ನಡೆಸಿದ್ದ. ಮುಂಗಡವಾಗಿ ಒಂದು ಲಕ್ಷ ಹಣ ಸಂದಾಯ ಕೂಡ ಮಾಡಿದ್ದ. ನಂತರದ ಬೆಳವಣಿಗೆಯಲ್ಲಿ ವೆಂಕಟೇಶ್ ಜಮೀನು ಕೊಡುವುದಿಲ್ಲ ಎಂದಿದ್ದರಂತೆ.  ಬಳಿಕ ಹಿರಿಯರ ಸಮ್ಮುಖ ರಾಜೀ ಪಂಚಾಯ್ತಿ ನಡೆದಿದೆ. ಎಲ್ಲಾ ಮುಗಿದು ಹೊರಗೆ ಬರುವಾಗ ಶಂಬುನಾಥ್ ಮತ್ತು ವೆಂಕಟೇಶ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಅದು ಕೈ ಕೈ ಮಿಲಾಯಿಸಿವ ಹಂತಕ್ಕೆ ಹೋಗಿ ಮಾರಾಮಾರಿಯಾಗಿದೆ. ಈ ಸಂದರ್ಭದಲ್ಲಿ ಶಂಭುನಾಥ್​ ಹಲ್ಲೆ ಮಾಡಿದ್ದು, ಅದರಿಂದ ವೆಂಕಟೇಶ್ ಮೃತಪಟ್ಟಿರುವುದಾಗಿ ಕುಟುಂಬಸ್ಥರು ದೂರಿದ್ದಾರೆ. 

ಈ ಸಂಬಂಧ ಮೃತ ವೆಂಕಟೇಶ್​ ಸಹೋದರ ನೀಡಿದ ದೂರಿನ ಆಧಾರದಲ್ಲಿ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-ಅರುಣ್ ನವಲಿ 

RELATED ARTICLES

Related Articles

TRENDING ARTICLES