ವಿಜಯಪುರ : ವಿಜಯಪುರ ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಇಂದು ವಿಜಯಪುರ ತಾಲೂಕಿನ ಹಿಟ್ಟನಹಳ್ಳಿ ಗ್ರಾಮದ ರೈತರಾದ ರಮೇಶ್ ಮಂಜಪ್ಪ ಕುಬರಡ್ಡಿ ಅವರ ಹೊಲದಲ್ಲಿ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಕುರಿತು ರೈತರಿಗೆ ಮಾಹಿತಿ ನೀಡಿದರು. ಎಲ್ಲಾ ರೈತರು ತಮ್ಮ ಜಮೀನಿನಲ್ಲಿ ಬಿತ್ತಿದ ಎಲ್ಲಾ ಬೆಳೆಗಳನ್ನು ಛಾಯಾಚಿತ್ರ ಸಹಿತ ರೈತರೇ ಸ್ವತಃ ದಾಖಲಿಸಲು ಕರೆ ನೀಡಿದರು. ರೈತರೇ ಸ್ವತಃ ಬೆಳೆ ವಿವರ ದಾಖಲಿಸುವುದರಿಂದ ಮುಂದೆ ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ಮತ್ತಿತರೇ ಯೋಜನೆಗಳ ಸವಲತ್ತು ಪಡೆಯುವಲ್ಲಿ ಅನುಕೂಲವಾಗುತ್ತದೆ ಎಂದು ತಿಳಿಸಿದರು. ತಮ್ಮಲ್ಲಿ ಸ್ಮಾರ್ಟ್ ಪೋನ್ ಇಲ್ಲದಿದ್ದಲ್ಲಿ ಅಥವಾ ಅಪ್ಲಿಕೇಶನ್ ಬಳಕೆ ಗೊತ್ತಿಲ್ಲದೇ ಇದ್ದಲ್ಲಿ ಗ್ರಾಮದ ಯುವಕರ ಅಥವಾ ಗ್ರಾಮಕ್ಕೆ ನೇಮಕವಾದ ಖಾಸಗಿ ನಿವಾಸಿಗಳ ಸಹಾಯ ಪಡೆಯಲು ರೈತರಿಗೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಡಾ.ರಾಜಶೇಖರ್ ವಿಲಿಯಮ್ಸ್, ಉಪ ಕೃಷಿ ನಿರ್ದೇಶಕ ಪ್ರಕಾಶ್ ಆರ್. ಚವ್ಹಾಣ್ ಹಾಗೂ ರೈತರು ಉಪಸ್ಥಿತರಿದ್ದರು…