Wednesday, January 22, 2025

ಆಸ್ತಿಗಾಗಿ ದಾಯಾದಿಗಳ ಕಲಹ; ವಿಷ ಕುಡಿದ 2 ಕುಟುಂಬದ 8 ಮಂದಿ!

ಮಂಡ್ಯ : ಆಸ್ತಿ ವಿಚಾರವಾಗಿ ದಾಯಾದಿಗಳ ನಡುವೆ ಕಲಹ ಉಂಟಾಗಿ, ಸೋದರ ಸಂಬಂಧಿ ಕುಟುಂಬದ 8 ಮಂದಿ ವಿಷ ಸೇವಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ಈ ಘಟನೆ ನಡೆದಿದೆ.
ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ರೆ, 7 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾರಾಯಣ್ ಮತ್ತು ಕರಿಯಪ್ಪ ಎಂಬ ಸೋದರ ಸಂಬಂಧಿಗಳ ನಡುವೆ ಆಸ್ತಿಗಾಗಿ ಆಗಿಂದಾಗ್ಗೆ ಕಲಹ ನಡೆಯುತ್ತಿತ್ತು. ಇಂದು ಎರಡೂ ಕುಟುಂಬಗಳ ನಡುವಿನ ಕಲಹ ವಿಕೋಪಕ್ಕೆ ತಿರುಗಿ ಪರಸ್ಪರ ಕಚ್ಚಾಡಿಕೊಂಡಿದ್ದರು.
ಇದರಿಂದ ಅವಮಾನಕ್ಕೀಡಾದ ಎರಡೂ ಕುಟುಂಬಗಳ 8 ಜನರು ವಿಷ ಸೇವಿಸಿದ್ದಾರೆ.
ಘಟನೆಯಲ್ಲಿ ಶೈಲಾ ಎಂಬ 35 ವರ್ಷದ ಮಹಿಳೆ ಮೃತಪಟ್ಟಿದ್ದರೆ, ಉಳಿದ 7 ಜನರಿಗೆ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಕರಣ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES