Monday, December 23, 2024

ಬಿಜೆಪಿ ಶಾಸಕರಿಗೆ ನೇರ ಎಚ್ಚರಿಕೆ ನೀಡುವೆ : ಕಾಗಿನೆಲೆ ಶ್ರೀ

ದಾವಣಗೆರೆ: ದಾವಣಗೆರೆಯ ಬೆಳ್ಳೂಡಿಯಲ್ಲಿ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ನೀವು ಬೇಕಾದ್ರೆ ಸಚಿವರಾಗಿ ಆದರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಅವರನ್ನ ಬದಲಾಯಿಸಲು ನೋಡಿದ್ರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಇಲ್ಲಸಲ್ಲದ ಆರೋಪ ಮಾಡಿ ಉಸ್ತುವಾರಿಯಿಂದ ತೆಗೆಸಿದ್ರೆ ಸರಿ ಇರಲ್ಲ, ನಾನು ದಾವಣಗೆರೆ ಜಿಲ್ಲೆಯ ಬಿಜೆಪಿ ಶಾಸಕರಿಗೆ ನೇರ ಎಚ್ಚರಿಕೆ ನೀಡುವೆ ಎಂದು ಕಾಗಿನೆಲೆ ಶ್ರೀ ಗುಡುಗಿದ್ದಾರೆ.

ಜಿಲ್ಲೆಯಲ್ಲಿ ಆರು ಜನ ಬಿಜೆಪಿ ಶಾಸಕರಿದ್ದರು ಸಚಿವ ಸ್ಥಾನ ಮರೀಚಿಕೆಯಾಗಿತ್ತು. ಅದಾದ ಬಳಿಕ ದಾವಣಗೆರೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದ ಭೈರತಿ ಬಸವರಾಜ್ ನೇಮಕವಾಗಿದ್ದರು. ಬಳಿಕ ದಾವಣಗೆರೆಗೆ ಹಲವು ಭಾರೀ ಆಗಮಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಜೊತೆಗೆ ಕೊರೋನಾ ನಿಯಂತ್ರಣ ಕುರಿತು ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ಇತ್ತ ಜಿಲ್ಲಾ ನಾಯಕರು, ಜಿಲ್ಲೆಗೆ ಸಚಿವ ಸ್ಥಾನ ಭೇಡಿಕೆ ಇಟ್ಟುಕೊಂಡು ಹಲವು ಆರೋಪಗಳ ಮೂಲಕ ಜಿಲ್ಲಾ ಉಸ್ತುವಾರಿ ಬದಲಿಸುವುದು, ಜೊತೆಗೆ ಜಿಲ್ಲೆಗೆ ಸಚಿವ ಸ್ಥಾನ ಪಡೆಯುವುದು ಹೀಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಯೋಜನೆ ಮಾಡಿದ್ದಾರೆ. ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಜಿಲ್ಲೆಯ ನಾಲ್ಕೈದು ಶಾಸಕರು ಭೇಟಿ ಆಗಿ ಭೈರತಿ ವಿರುದ್ದವಾಗಿ ಆರೋಪಗಳ ಸುರಿಮಳೆ ಮಾಡಿ, ಸಚಿವ ಸ್ಥಾನ ಬೇಕೆ ಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ ಎನ್ನಲಾಗಿದೆ. ಇದನ್ನು ಅರಿತ ಕಾಗಿನೆಲೆ ಶ್ರೀ ಈ ರೀತಿಯಾಗಿ ಗುಡುಗಲು ಕಾರಣ ಎಂದು ವಿಶ್ಲೇಷಿಸಲಾಗಿದೆ.

RELATED ARTICLES

Related Articles

TRENDING ARTICLES