ಹಾಸನ : ಹಾಸನ ಜಿಲ್ಲೆಯಲ್ಲಿ ಇಂದು 7 ಜನ ಕೊರೋನಾ ಸೋಂಕಿಗೆ ಮೃತರಾಗಿದ್ದು, ಎರಡು ದಿನಕ್ಕೆ 16 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಮೃತರ ಸಂಖ್ಯೆ 143ಕ್ಕೆ ಏರಿಕೆಯಾಗಿದೆ. ಅಲ್ಲದೇ ಹೊಸದಾಗಿ 177 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 4998ಕ್ಕೆ ಏರಿಕೆಯಾಗಿದೆ. ಮೃತಪಟ್ಟ 7 ಜನರಲ್ಲಿ 5 ಮಂದಿ ಹಾಸನ ತಾಲ್ಲೂಕಿನವರಾಗಿದ್ದು, ಅವರಲ್ಲಿ 75 ವರ್ಷ, 55 ವರ್ಷ, 38 ವರ್ಷ ಮತ್ತು 51 ವರ್ಷದ ಪುರುಷರು ಹಾಗೂ 65 ವರ್ಷದ ಮಹಿಳೆಯಾಗಿದ್ದಾರೆ. ಅರಸೀಕೆರೆ ತಾಲ್ಲೂಕಿನ 72 ವರ್ಷ ಹಾಗೂ 65 ವರ್ಷದ ಮಹಿಳೆಯರು ಕೂಡ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಸಕ್ರಿಯವಾಗಿ 1685 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 3170 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 52 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಪತ್ತೆಯಾದ 177 ಕೊರೋನಾ ಸೋಂಕು ಪ್ರಕರಣಗಳಲ್ಲಿ 37 ಅರಸೀಕೆರೆ, 12 ಚನ್ನರಾಯಪಟ್ಟಣ, 9 ಆಲೂರು, 76 ಹಾಸನ, 21 ಹೊಳೆನರಸೀಪುರ, 9 ಅರಕಲಗೂಡು, 5 ಬೇಲೂರು, 7 ಸಕಲೇಶಪುರ ತಾಲೂಕಿನವರಿಗೆ ಸೋಂಕು ಅಂಟಿದೆ. ಅಲ್ಲದೇ ಹೊರ ಜಿಲ್ಲೆಯ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಅವರು ತಿಳಿಸಿದ್ದಾರೆ.