ಹಾಸನ : ಅಮಾಯಕ ಹಸುಗಳಿಗೆ ವಿಷವಿತ್ತು ಕಿಡಿಗೇಡಿಗಳು ಕೊಂದಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಗ್ಗೋವೆ ಗ್ರಾಮದಲ್ಲಿ ನಡೆದಿದೆ. ವಿಷಾಹಾರ ಸೇವಿಸಿ ಆರು ಹಸುಗಳು ಸಾವನ್ನಪ್ಪಿವೆ. ದುಷ್ಕರ್ಮಿಗಳು ಹಲಸಿನಹಣ್ಣಿನಲ್ಲಿ ವಿಷವಿಟ್ಟಿದ್ದು, ಆರು ಹಸುಗಳು ಹಲಸಿನಹಣ್ಣನ್ನು ತಿಂದು ರಕ್ತಕಾರಿ ಸಾವನ್ನಪ್ಪಿವೆ. ಸ್ಥಳದಲ್ಲಿಯೇ ಎರಡು ಸತ್ತಿದ್ದು, ಉಳಿದ ಹಸುಗಳು ಕೊಟ್ಟಿಗೆಯಲ್ಲಿ ಸಾವನ್ನಪ್ಪಿವೆ. ಹೆಗ್ಗೋವೆ ಗ್ರಾಮದ ಶಾಂತೇಗೌಡ, ಸುರೇಶ್, ನಂಜಪ್ಪ ಎಂಬುವವರಿಗೆ ಸೇರಿದ ಜಾನುವಾರುಗಳಾಗಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗ್ರಾಮದ ಜನರು ವಿಷವಿಕ್ಕಿದ ದುಷ್ಕರ್ಮಿಗಳ ಪತ್ತೆಗೆ ಆಗ್ರಹಿಸುತ್ತಿದ್ದಾರೆ.
ಪ್ರತಾಪ್ ಹಿರೀಸಾವೆ