Wednesday, January 22, 2025

ಕ್ಷುಲ್ಲಕ ವಿಚಾರಕ್ಕೆ ಜಗಳ: ತಂದೆಯನ್ನು ಕೊಂದ ಪಾಪಿ ಮಗ..!

ದಕ್ಷಿಣ ಕನ್ನಡ: ಜಿಲ್ಲೆಯ ಪುತ್ತೂರು ತಾಲ್ಲೂಕಿನ ತಿಂಗಳಾಡಿ ಎಂಬಲ್ಲಿ ಕ್ಷುಲ್ಲಕ ಕಾರಣವೊಂದಕ್ಕೆ ತಂದೆ-ಮಗನ ನಡುವೆ ನಡೆದ ಜಗಳವು ತಂದೆಯ ಕೊಲೆಯಲ್ಲಿ ಅಂತ್ಯವಾಗಿದೆ. ಗಂಗಾಧರ ನಾಯ್ಕ ಕೊಲೆಯಾದ ದುರ್ದೈವಿ.

ಕಳೆದ ತಡರಾತ್ರಿ ತಂದೆ ಮತ್ತು ಮಗನ ನಡುವೆ ಜಗಳ ಉಂಟಾಗಿ ಪರಸ್ಪರ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡ ತಂದೆ ಗಂಗಾಧರ ನಾಯ್ಕ ಆಸ್ಪತ್ರೆಗೆ ಸಾಗಿಸುವ ವೇಳೆ ಅಸುನೀಗಿದ್ದಾರೆ. ಜಗಳದಿಂದ ಆರೋಪಿ ಶಶಿಧರ ನಾಯ್ಕನಿಗೂ ಸಣ್ಣಮಟ್ಟಿನ ಗಾಯವಾಗಿದ್ದಾಗಿ ತಿಳಿದು ಬಂದಿದೆ. ಮಾದಕ ವಸ್ತು ಸೇವನೆಯೇ ಜಗಳಕ್ಕೆ ಕಾರಣವಾಗಿರಬಹುದು ಎಂದು ಸಂಶಯ ವ್ಯಕ್ತವಾಗಿದೆ. ಈ ಹಿಂದೆಯೂ ಇವರಿಬ್ಬರು ಜಗಳವಾಡುತ್ತಲೇ ಇದ್ದು, ನಿನ್ನೆ ಯಾವ ಕಾರಣಕ್ಕಾಗಿ ಇವರಿಬ್ಬರ ಮಧ್ಯೆ ಜಗಳ ತಾರಕಕ್ಕೇರಿದೆ ಅನ್ನೋದು ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. ಆರೋಪಿ ಶಶಿಧರ ನಾಯ್ಕ ಬಿಜೆಪಿ ಯುವಮೋರ್ಚಾ ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲೂ ಗುರುತಿಸಿಕೊಂಡಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ‌. ಈ ಸಂಭವಿಸಿದಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-ಇರ್ಷಾದ್ ಕಿನ್ನಿಗೋಳಿ

RELATED ARTICLES

Related Articles

TRENDING ARTICLES