Wednesday, January 22, 2025

ಕಾಂಗ್ರೆಸ್​ 56 ವರ್ಷ ಆಡಳಿತ ಮಾಡಿದರೂ ಯಾರ ರಕ್ಷಣೆಯನ್ನೂ ಮಾಡಿಲ್ಲ : ಗೋವಿಂದ ಕಾರಜೋಳ

ಕೊಪ್ಪಳ: ಕಾಂಗ್ರೆಸ್‌ನ 56 ವರ್ಷದ ಆಡಳಿತದ ಪಾಪದ ಫಲವಾಗಿ ಪುಂಡ ಪೋಕರಿಗಳು ಮೆರೆಯುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ‌ ಕಾರಜೋಳ‌ ಟೀಕಿಸಿದರು.

ಕುಷ್ಟಗಿ ತಾಲ್ಲೂಕಿನ ಹನುಮಸಾಗರದಲ್ಲಿ ಇಂದಿರಾಗಾಂಧಿ ವಸತಿ ಶಾಲೆಗೆ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬರೀ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ದೇಶದಲ್ಲಿ 56 ವರ್ಷ ಆಡಳಿತ ಮಾಡಿದರೂ ಯಾರ ರಕ್ಷಣೆಯನ್ನು ಮಾಡಿಲ್ಲ ಎಂದು ಹೇಳಿದರು. ಸಂವಿಧಾನದ ಆಶಯದಂತೆ ದೀನ ದಲಿತರ ಉದ್ಧಾರವನ್ನೂ ಸಹ ಮಾಡಲಿಲ್ಲ. ಕಾಂಗ್ರೆಸ್ ಉತ್ತಮ ಆಡಳಿತ ನೀಡಿದ್ದರೆ ಇಷ್ಟೊತ್ತಿಗೆ ದೇಶದಲ್ಲಿ ಸಮಸ್ಯೆಯೇ ಇರಬಾರದಿತ್ತು ಮತ್ತು ಪುಂಡ ಪೋಕರಿಗಳನ್ನು ಬೆಳೆಸಿದ್ದಾರೆ ಆ ಪುಂಡ ಪೋಕರಿಗಳು ಇವಾಗ ಶಾಸಕರನ್ನೂ ಸಹ ಬಿಡುತ್ತಿಲ್ಲ. ಈ ಮಟ್ಟಕ್ಕೆ ಪುಂಡರನ್ನು ಕಾಂಗ್ರೆಸ್ ನವರು ಬೆಳೆಸಿದ್ದಾರೆ ಎಂದು ಕಿಡಿ ಕಾರಿದರು.

-ಶುಕ್ರಾಜ ಕುಮಾರ್

RELATED ARTICLES

Related Articles

TRENDING ARTICLES