Saturday, November 23, 2024

ಹಾಸನದಲ್ಲಿಂದು 250 ಹೊಸ ಕೊರೋನಾ ಕೇಸ್, 9 ಮಂದಿ‌ ಬಲಿ

ಹಾಸನ : ಹಾಸನ ಜಿಲ್ಲೆಯಲ್ಲಿ ಇಂದು 9 ಮಂದಿ ಕೊರೋನಾ ಸೋಂಕಿಗೆ ಮೃತರಾಗಿದ್ದಾರೆ. ಇದರೊಂದಿಗೆ ಒಟ್ಟು ಮೃತರ ಸಂಖ್ಯೆ 136ಕ್ಕೆ ಏರಿಕೆಯಾಗಿದೆ. ಇಂದು ಹೊಸದಾಗಿ 250 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 4821ಕ್ಕೆ ಏರಿಕೆಯಾಗಿದೆ. ಇಂದು ಮೃತಪಟ್ಟವರಲ್ಲಿ ಅರಕಲಗೂಡು ತಾಲ್ಲೂಕಿನ 50 ವರ್ಷದ ಇಬ್ಬರು ಪುರುಷರು, ಹಾಸನ ತಾಲ್ಲೂಕಿನ 56 ವರ್ಷ, 65 ವರ್ಷ ಹಾಗೂ 40 ವರ್ಷದ ಪುರುಷರು, ಮಂಡ್ಯ ಜಿಲ್ಲೆಗೆ ಸೇರಿದ 70 ವರ್ಷದ ಮಹಿಳೆ, ಅರಸೀಕೆರೆ ತಾಲ್ಲೂಕಿನ 80 ವರ್ಷದ ಮಹಿಳೆ, ಸಕಲೇಶಪುರ ತಾಲ್ಲೂಕಿನ 80 ವರ್ಷದ ಮಹಿಳೆ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ 80 ವರ್ಷದ ಮಹಿಳೆ ಉಸಿರಾಟದ ತೊಂದರೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಸಕ್ರಿಯವಾಗಿ 1648 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 3037 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 50 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಪತ್ತೆಯಾದ 250 ಕೊರೋನಾ ಸೋಂಕು ಪ್ರಕರಣಗಳಲ್ಲಿ 11 ಜನ ಆಲೂರು ತಾಲ್ಲೂಕಿನವರು, 20 ಜನ ಅರಕಲಗೂಡು ತಾಲ್ಲೂಕಿನವರು, 17 ಜನ ಅರಸೀಕೆರೆ ತಾಲ್ಲೂಕಿನವರು, 20 ಜನ ಚನ್ನರಾಯಪಟ್ಟಣ ತಾಲ್ಲೂಕಿನವರು, 139 ಜನ ಹಾಸನ ತಾಲ್ಲೂಕು, 12 ಜನ ಹೊಳೆನರಸೀಪುರ ತಾಲ್ಲೂಕು, 10 ಜನ ಅರಕಲಗೂಡು ತಾಲ್ಲೂಕು, ಬೇಲೂರು ತಾಲ್ಲೂಕಿನ 21 ಜನ, ಸಕಲೇಶಪುರ ತಾಲ್ಲೂಕಿನಲ್ಲಿ 5 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

ಪ್ರತಾಪ್ ಹಿರೀಸಾವೆ

RELATED ARTICLES

Related Articles

TRENDING ARTICLES