ಹಾವೇರಿ: ಕಳೆದ ಎರಡು ಮೂರು ದಿನಗಳಿಂದ ಅತೀ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆ, ರೈತ ಬೆಳೆದ ಬೆಳೆಗಳು ಸಂಪೂರ್ಣ ನಾಶದ ಸುಳಿಗೆ ಸಿಲುಕಿದಂತಾಗಿದೆ, ಹಾವೇರಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಬಾರಿ ಮಳೆಗೆ ಮೆಕ್ಕೆಜೋಳ, ಹತ್ತಿ, ಸೋಯಾಬಿನ್, ಶೇಂಗಾ ಇನ್ನಿತರ ಪ್ರಮುಖ ಬೆಳೆಗಳು ವಿವಿಧ ರೋಗಳಿಗೆ ತುತ್ತಾಗುತ್ತಿವೆ, ಅದ್ರಲ್ಲು ಪ್ರಮುಖವಾಗಿ ಮೆಕ್ಕೆಜೋಳ, ಹತ್ತಿ ಜವಳು ಹಿಡಿದು, ಕೊಳೆಯುವ ಸ್ಥೀತಿಗೆ ಬಂದಿದೆ, ಇದರಿಂದಾಗಿ ಅನ್ನದಾತ ಕಂಗಾಲಾಗಿದ್ದಾನೆ, ಯೂರಿಯಾ ಗೊಬ್ಬರ ಹಾಕಿ ಬೆಳೆಗಳನ್ನ ಉಳಿಸಿಕೊಳ್ಳೊಣ ಎಂದರ ಗೊಬ್ಬರ ಸಿಗುತ್ತಿಲ್ಲ, ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತ ಸಮುದಾಯ ವರುಣನ ಅಬ್ಬರಕ್ಕೆ ನಲುಗಿ ಹೋಗಿದೆ, ಅತೀ ಹೆಚ್ಚಾದ ಮಳೆಗೆ ಮೆಕ್ಕೆಜೋಳದ ಬೆಳೆ ಸಂಪೂರ್ಣ ನಾಶವಾಗಿದೆ.