Wednesday, January 22, 2025

ಡಿಕೆ ಶಿವಕುಮಾರ್ ವಿರುದ್ಧ ಗುಡುಗಿದ ಸಚಿವ ಸಿ.ಟಿ.ರವಿ

ಚಿಕ್ಕಮಗಳೂರು : ಡಿ.ಕೆ ಶಿವಕುಮಾರ್ ಅವರಿಗೆ ತಮ್ಮ ಪಕ್ಷದ ಶಾಸಕನ ಮನೆ ಧ್ವಂಸವಾಗಿರೋದಕ್ಕಿಂತ ಸಮಾಜಘಾತುಕ ಶಕ್ತಿಗಳೇ ದೊಡ್ಡವಾದ್ವ ಎಂದು ಸಿಚಿವ ಸಿ.ಟಿ ರವಿ ಡಿಕೆಶಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಮಾತನಾಡಿದ ಅವರು, ಪೊಲೀಸರು ಕಾರ್ಪೋರೇಟರ್ ಗಳಿಗೆ ನೋಟಿಸ್ ಕೊಟ್ಟಿರೋದಕ್ಕೆ ಸರ್ಕಾರದ ವಿರುದ್ಧ ಡಿಕೆಶಿ ಅಸಮಾಧಾನ ಹೊರಹಾಕಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಡಿಕೆಶಿ ಆರೋಪ ಮಾಡೋದು ಅವರನ್ನ ಬೆಂಬಲಿಸುವ ಮಾತುಗಳನ್ನಾಡಿದ್ದಾರೆ. ಸುಖಾಸುಮ್ಮನೆ ಮಾಡಲು ಇಲ್ಲಿ ಯಾರೂ ಕೆಲಸ ಇಲ್ಲದೆ ಇರೋರಿಲ್ಲ. 300ಕ್ಕೂ ಹೆಚ್ಚು ವಾಹನ ಸುಟ್ಟಿದ್ದಾರೆ. ಪೊಲೀಸ್ ಸ್ಟೇಷನ್ ಭಸ್ಮ ಆಗಿದೆ. ಅವರದ್ದೇ ಪಕ್ಷದ ಶಾಸಕನ ಮನೆಯೂ ಭಸ್ಮ ಆಗಿದೆ. ಅವರು ಬೇರೆ ಪಕ್ಷ ಇರಬಹುದು, ಆದ್ರೆ, ಅವರ ರಾಜಕಾರಣದ ದಾರಿ ಬಗ್ಗೆ ಅನುಮಾನದ ಮಾತುಗಳನ್ನಾಡಿದ್ದಾರೆ. ಅವರು ಆಲೋಚಿಸುವ ರೀತಿ ನೋಡಿದ್ರೆ, ತಮ್ಮ ಪಕ್ಷದ ಶಾಸಕನಿಗಿಂತ ಸಮಾಜಘಾತುಕ ಶಕ್ತಿಗಳೇ ಇವರಿಗೆ ದೊಡ್ಡವಾದ್ವ ಎಂದು ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ. ಸಂಪನ್ನರು ಭಯ ಬೀಳಬೇಕಿಲ್ಲ. ಕಳ್ಳರನ್ನ ಬಿಡೋದಿಲ್ಲ ಎಂದಿದ್ದಾರೆ. 300ಕ್ಕೂ ಹೆಚ್ಚು ಜನರನ್ನ ಬಂಧಿಸಿದೆ. ನಮ್ಮ ಪಕ್ಷ ಸಮಾಜಘಾತುಕ ಶಕ್ತಿಗಳ ಜೊತೆ ರಾಜಿ ಮಾಡಿಕೊಂಡು ಆಡಳಿತ ಮಾಡೋ ಪಕ್ಷವಲ್ಲ. ಯಾವುದೇ ಸಮಾಜಘಾತುಕ ಶಕ್ತಿಗಳ ಜೊತೆ ನಾವು ರಾಜಿನು ಮಾಡಿಕೊಳ್ಳಲ್ಲ. ಅವರ ಜೊತೆ ಲಾಭ ಮಾಡಿಕೊಳ್ಳೋ ರಾಜಕಾರಣವನ್ನೂ ನಾವು ಮಾಡಲ್ಲ ಎಂದಿದ್ದಾರೆ. 300ಕ್ಕೂ ಹೆಚ್ಚು ಜನರನ್ನ ಬಂದಿಸಿದ್ದೇವೆ. ಅದಕ್ಕೆ ಬೇಕಾದ ಸಾಕ್ಷ್ಯಾಧಾರಗಳನ್ನ ಸಂಗ್ರಹಿಸಿದ್ದೇವೆ. ವಾಟ್ಸಾಪ್-ಫೇಸ್ಬುಕ್‍ನಲ್ಲಿ ಯಾರ್ಯಾರು ಕರೆ ಕೊಟ್ರು, ಎಲ್ಲೆಲ್ಲಿ ಮಾರಕಾಯುಧಗಳನ್ನ ಸಂಗ್ರಹಿಸಿಟ್ರು. ಪೆಟ್ರೋಲ್ ಸಂಗ್ರಹ ಎಲ್ಲಿ, ಹಣದ ಮೂಲ ಎಲ್ಲಿ ಎಲ್ಲದರ ಮಾಹಿತಿ ಸಂಗ್ರಹವಾಗ್ತಿದೆ. ಎಲ್ಲವನ್ನ ಜನರ ಮುಂದೆ ಇಡ್ತೀವಿ, ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲ. ರಾಜಿ ಆಗಲು ಪಕ್ಷದ ಒಳಗೂ ಬಿಡಲ್ಲ. ಹೊರಗೂ ಬಿಡಲ್ಲ ಎಂದಿದ್ದಾರೆ…

-ಸಚಿನ್‌ ಶೆಟ್ಟಿ 

RELATED ARTICLES

Related Articles

TRENDING ARTICLES