Wednesday, January 22, 2025

ಶಾಸಕ ಸೋಮನಗೌಡ ಪಾಟೀಲ್ ಗೆ ಕೊರೋನಾ ಪಾಸಿಟಿವ್ ದೃಢ..!

ವಿಜಯಪುರ : ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ್ ಗೆ ಕೊರೋನಾ ಪಾಸಿಟಿವ್ ದೃಢವಾಗಿದ್ದು ಈ ಕುರಿತು ಫೇಸ್ ಬುಕ್​ನಲ್ಲಿ ಸ್ವತಃ ತಾವೇ ಪೋಸ್ಟ್ ಹಾಕಿದ್ದಾರೆ.

ಕಳೆದ ಆಗಸ್ಟ್ 14 ರಂದು ಆರೋಗ್ಯ ತಪಾಸಣೆ ಹಾಗೂ ಕೊರೋನಾ ಟೆಸ್ಟ್ ಮಾಡಿಸಿದೆ ಕೊರೋನಾ ಪಾಸಿಟಿವ್ ದೃಢವಾಗಿದೆ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವೆ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲ ಯಾರೂ ಆತಂಕಪಡುವ ಅಗತ್ಯವಿಲ್ಲ, ಬೇಗನೇ ಗುಣಮುಖನಾಗಿ ಕ್ಷೇತ್ರದ ಸೇವೆಗೆ ಮರಳುತ್ತೇನೆ, ನನ್ನ ಸಂಪರ್ಕಕ್ಕೆ ಬಂದವರು ಮುಂಜಾಗೃತಾ ಕ್ರಮವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಸಾಮಾಜಿಕ ಅಂತರ ಕಾಪಾಡಿಕೊಂಡು ಮನೆಯಲ್ಲಿ ಇರಬೇಕೆಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES