ಹಾವೇರಿ : ಹಿರೇಕೆರೂರು ಪಟ್ಟಣದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ಕ್ಷೇತ್ರದ ಜನರಿಗೆ ಮಾಸ್ಕ್ ವಿತರಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ನನ್ನ ಪತ್ನಿ ಹಾಗೂ ಸಿಬ್ಬಂದಿಗೆ ಕರೋನಾ ಪಾಸಿಟಿವ್ ಆಗಿತ್ತು.ಸದ್ಯ ಸೋಂಕಿನಿಂದ ಗುಣಮುಖರಾಗಿದ್ದೇವೆ. ಸೋಂಕು ತಗುಲಿದಾಗ ನಮ್ಮ ಆರೋಗ್ಯಕ್ಕಾಗಿ ಕ್ಷೇತ್ರದ ಜನತೆ ಪಾರ್ಥಿಸಿದ್ದಾರೆ. ಜನತೆಯ ಋಣವನ್ನು ತೀರಿಸಬೇಕಿದೆ. ಜನರ ಆರೋಗ್ಯಕ್ಕಾಗಿ
ಎರಡುವರೆ ಲಕ್ಷ ಮಾಸ್ಕ್ ಗಳನ್ನು ಸಿದ್ಧಪಡಿಸಲಾಗಿದೆ .ಮಾಸ್ಕ್ ವೆಚ್ಚ ಸುಮಾರು 40 ಲಕ್ಷ ರೂಪಾಯಿ ತಗುಲಿದದ್ದು, ಪ್ರತಿಯೊಬ್ಬರಿಗೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ವ್ಯಕ್ತಿಕವಾಗಿ ಮಾಸ್ಕ್ ವಿತರಣೆ ಮಾಡುತ್ತಿದ್ದೇನೆ ಎಂದರು.