ನೆಚ್ಚಿನ ನಾಯಕ ಮಹೇಂದ್ರ ಸಿಂಗ್ ಧೋನಿ ಹಾದಿಯಲ್ಲಿ ಸುರೇಶ್ ರೈನಾ ಕೂಡ ಸಾಗಿದ್ದಾರೆ. ಧೋನಿ ಬೆನ್ನಲ್ಲೇ ರೈನಾ ದಿಢೀರ್ ಅಂತ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
ಎಂಎಸ್ ಧೋನಿ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಪ್ರಕಟಿಸುವ ಮೂಲಕ ಮುಂದಿನ 1929 ಗಂಟೆಗಳ ಬಳಿಕ (ಸರಿಯಾಗಿ 80 ದಿನಗಳು) ನನ್ನ ನಿವೃತ್ತಿ ಎಂದು ಘೋಷಿಸಿದ್ದರು. ಅದರ ಬೆನ್ನಲ್ಲೇ ಸುರೇಶ್ ರೈನಾ ಕೂಡ ನಿವೃತ್ತಿ ಘೋಷಿಸಿದ್ದಾರೆ.
ಸುರೇಶ್ ರೈನಾ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಧೋನಿ ಜೊತೆಗಿನ ಫೋಟೊ ಒಂದನ್ನು ಪ್ರಕಟಿಸಿದ್ದು, ತಾವು ಕೂಡ ನಿವೃತ್ತಿ ಘೊಷಿಸಿದ್ದಾರೆ.
“ನಿಮ್ಮ ಜೊತೆ ಆಡಿದ್ದು ಅತ್ಯಂತ ಪ್ರಿಯವಾದ ಸಂಗತಿ @ಎಂಎಸ್‌ಡಿ. ನನ್ನ ಮನಸಾರೆ ಹೆಮ್ಮೆಯ ಭಾವದಿಂದ ನಿಮ್ಮ ಈ ಪಯಣದಲ್ಲಿ ನಾನು ಕೂಡ ಭಾಗಿಯಾಗುತ್ತೇನೆ. ಥ್ಯಾಂಕ್ಯೂ ಇಂಡಿಯಾ. ಜೈ ಹಿಂದ್,” ಎಂದಿದ್ದಾರೆ…