Tuesday, January 21, 2025

ಗಣೇಶ ಹಬ್ಬದ ಆಚರಣೆಗೆ ಸರ್ಕಾರದ ಮಾರ್ಗಸೂಚಿ..!

ಕಾರವಾರ: ಗಣಪತಿ ಹಬ್ಬ ಆಚರಣೆಗೆ ಸರಕಾರದಿಂದ ಕೊನೆಗೂ ಮಾರ್ಗಸೂಚಿ ಹೊರಬಿದ್ದಿದೆ. ಕೇವಲ ಒಂದು ವಾರ ಇದ್ದಾಗ ಸರಕಾರ ಹಬ್ಬ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿ ಸಾರ್ವಜನಿಕ ಗಣಪತಿ ಉತ್ಸವ ಆಚರಣೆ ಮಾಡುವವರಿಗೆ ಪೇಚಿಗೆ ಸಿಲುಕಿಸಿದೆ. ಎರಡು ದಿನಗೋಸ್ಕರವಾದ್ರೂ ಗಣಪತಿ ಇಡಲು ಇಚ್ಚಿಸಿ ಗಣಪತಿ ಸಿದ್ದಪಡಿಸಲು ಸೂಚಿಸಿದ ಕಾರವಾರ ಸಾರ್ವಜನಿಕ ಗಣೇಶೋತ್ಸವ ಸಮೀತಿಯವರ ವಿರೋಧ ಕೂಗು ಕೇಳಿಬರುತ್ತಿದೆ.

ಹೌದು ಸರ್ಕಾರ ಕೊನೆಗೂ ಸಾರ್ವಜನಿಕ ಗಣೇಶೋತ್ಸವ ಸಮೀತಿಯವರ ಕೆಂಗೆಣ್ಣಿಗೆ ಗುರಿ ಆಗಿದೆ ಅಂದ್ರೆ ತಪ್ಪಾಗಲ್ಲ. ಸರ್ಕಾರದ ಮಾರ್ಗಸೂಚಿ ಬಂದಮೇಲೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿ ವಿವಿಧ ಕಡೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಕಂಗಾಲುಬಿದ್ದಿದ್ದಾರೆ. ಸಾರ್ವಜನಿಕವಾಗಿ ಗಣಪತಿ ಕೂರಿಸುವುದನ್ನ ನಿಷೇದಿಸಿದ್ದು ಈಗಾಗಲೆ ಗಣಪತಿ ವಿಗ್ರಹ ಸಿದ್ದಪಡಿಸಲು ನೀಡಿದವರು ಮುಂದೇನು ಎನ್ನುವಂತಾಗಿದೆ. ಗಣಪತಿಯನ್ನ ತರುವ ಹಾಗೆಯೂ ಇಲ್ಲ ಇತ್ತ ಕಲಾಕಾರರ ಮನೆಯಲ್ಲಿ ಸಿದ್ದವಾದ ಗಣಪತಿ ಆ ಮನೆಯಲ್ಲಿ ಇಡುವ ಹಾಗೆಯೂ ಇಲ್ಲ ಇಂತ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟು ದಿನ ಸ್ಥಳೀಯ ಜಿಲ್ಲಾಡಳಿತ ಸಾರ್ವಜನಿಕವಾಗಿ ಎರಡು ದಿನ ಹಬ್ಬ ಆಚರಿಸಬಹುದು ಎಂದು ಗೊಂದಲದಲ್ಲೆ ಹೇಳಿತ್ತು ಇದನ್ನ ನಂಬಿದ್ದ ಇಲ್ಲಿನ ಸಾರ್ವಜನಿಕ ಗಣೆಶೋತ್ಸವ ಸಮಿತಿಯವರು ಒಂದು ಅಥವಾ ಎರಡು ದಿನ ಹಬ್ಬ ಆಚರಣೆ ಮಾಡುವ ನಿಟ್ಟಿನಲ್ಲಿ ಗಣೇಶನ ವಿಗ್ರಹ ಸಿದ್ದಪಡಿಸಲು ಕಲಾಕಾರರಿಗೆ ಹೇಳಿದ್ದರು ಈಗ ವಿಗ್ರಹ ಸಿದ್ದವಾಗಿದೆ ಆದ್ರೆ ಪ್ರತಿಷ್ಠಾಪಿಸಲು ಅವಕಾಶ ಇಲ್ಲದಂತಾಗಿದೆ. ಅದೇನೆ ಇರಲಿ ಸರಕಾರದ ಈ ಗೊಂದಲಮಯ ಮಾರ್ಗಸೂಚಿಯನ್ನ ತಾವು ಪಾಲನೆ ಮಾಡುವುದು ಕಷ್ಟ ಹೀಗಾಗಿ ಒಂದು ದಿನವಾದ್ರೂ ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತೆವೆ ಅಂತಿದ್ದಾರೆ.

ಇನ್ನೂ ಖಡಕ್ ಆಗಿ ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳದಲ್ಲಿ ಗಣೇಶನ ವಿಗ್ರಹ ತಂದು ಪ್ರತಿಷ್ಠಾಪಿಸಿ ಪೂಜಿಸುವಂತಿಲ್ಲ ಎಂದು ಹೇಳಿದೆ. ಆದ್ರೆ ಇದೆ ಮಾರ್ಗಸೂಚಿ ಹದಿನೈದು ದಿನದ ಮುಂಚಿತವಾಗಿ ನೀಡಿದ್ರೆ ಇಂತ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಕಾರವಾರದಲ್ಲಿ ಗಣಪತಿಹಬ್ಬವನ್ನ ಅದ್ಧೂರಿ ಆಗಿ ಆಚರಣೆ ಮಾಡಲಾಗುತ್ತದೆ ಆದ್ರೆ ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಇಲ್ಲಿನ ಸಮಿತಿಯವರು ಸರಳವಾಗಿ ಹಬ್ಬ ಆಚರಣೆ ಮಾಡಲು ನಿರ್ಧರಿಸಿದ್ದರು. ಆದ್ರೆ ಈ ನಡುವೆ ಸರ್ಕಾರ ಸಾರ್ವಜನಿಕ ಜಾಗದಲ್ಲಿ ಗಣಪತಿ ವಿಗ್ರಹ ಪ್ರತಿಷ್ಠಾಪನೆಗೆ ನಿಷೇದಿಸಿರುವುದರಿಂದ ದಿಕ್ಕೆ ತೋಚದಂತಾಗಿದ್ದಾರೆ. ಒಂದೆಡೆ ಕಲಾಕಾರರ ಮನೆಯಲ್ಲಿ ಸಿದ್ದವಾಗಿರುವ ಗಣೆಶನ ವಿಗ್ರಹ ಎಲ್ಲಿ ಇಟ್ಟು ಪೂಜೆ ಮಾಡೋದು ಎನ್ನೋದು ದೊಡ್ಡ ತಲೆನೋವಿನ ಜತೆ ಧಾರ್ಮಿಕ ಭಾವನೆಯ ಪ್ರಶ್ನೆಯಾಗಿದೆ. ಇವೆಲ್ಲ ವಿಚಾರ ಕಣ್ಣಮುಂದೆ ಕಾಣುತ್ತಿದ್ರು ಸರ್ಕಾರ ಇಂತ ಮಾರ್ಗಸೂಚಿ ಹೊರಡಿಸಿದ್ದು ಎಲ್ಲರನ್ನು ಪೇಚಿಗೆ ಸಿಕ್ಕಿ ಹಾಕಿಸಿದೆ ಎಂದು  ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ದಿಲೀಪ್ ಹೇಳಿದ್ದಾರೆ.

ಒಟ್ಟಾರೆ ವಿಘ್ನ ನಿವಾರಕನ ಹಬ್ಬಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 1200 ಸಮಿತಿಯವರು ಸರರ್ಕಾರದ ಮಾರ್ಗಸೂಚಿಗೆ ಕಂಗಾಲಾಗಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಪೂಜೆ ಮಾಡಲು ಒಂದು ದಿನವಾದ್ರು ಅವಕಾಶ ಮಾಡಿಕೊಡಿ ಎನ್ನೋದು ಆಗ್ರಹವಾಗಿದೆ. ಜೊತೆಗೆ ಪೂಜೆ ನಿರ್ಭಂದಿಸುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯ ಕೂಡಾ ಕೇಳಿ ಬರುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಉತ್ತರ ಕನ್ನಡ ಜಿಲ್ಲೆಯ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.

– ಉದಯ ಬರ್ಗಿ 

RELATED ARTICLES

Related Articles

TRENDING ARTICLES