ತುಮಕೂರು : ಜಿಲ್ಲೆಯಲ್ಲಿ ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ 3 ಸಾವಿರ ಗಡಿದಾಟಿದ್ದು ಜಿಲ್ಲೆಯಲ್ಲಿ 3312 ಜನರಿಗೆ ಕರೋನಾ ಸೋಂಕು ತಗುಲಿದೆ. 3312 ಸೋಂಕಿತರಲ್ಲಿ ಈಗಾಗಲೇ 2194 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಆದ್ರೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಸಹ ದಿನೇ ದಿನೇ ಹೆಚ್ಚುತ್ತಲೇ ಇದೆ, ಸೋಂಕಿನ ಆರಂಭದಲ್ಲಿ ದಿನಕ್ಕೆ ಕೊರೋನಾಗೆ ಒಬ್ಬರು ಇಬ್ಬರು ಸಾವನ್ನಪ್ಪುತ್ತಿದ್ರೆ, ಸದ್ಯದ ಸ್ಥಿತಿಯಲ್ಲಿ ದಿನನಿತ್ಯ ನಾಲ್ಕರಿಂದ ಆರು ಕೊರೋನಾ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಇನ್ನೂ ಇಂದು ಸಹ ಐವರು ಸಾವನ್ನಪ್ಪಿದ್ದು ತುಮಕೂರು ನಗರದ ಇಬ್ಬರು, ತುರುವೇಕೆರೆ, ಪಾವಗಡ ಹಾಗೂ ತುಮಕೂರು ತಾಲೂಕಿನ ಹೆಬ್ಬೂರಿನ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಇದರೊಂದಿಗೆ ಜಿಲ್ಲೆಯಲ್ಲಿ 101 ಮಂದಿ ಕರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ.