Monday, December 23, 2024

 150 ಅಡಿ ಎತ್ತರದ ಧ್ವಜಸ್ತಂಭದ ಮೇಲೆ ಹಾರಿದ ತ್ರಿವರ್ಣ ಧ್ವಜ !

ಬಳ್ಳಾರಿ : ಜಿಲ್ಲೆಯ ಹೊಸಪೇಟೆಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು. ವಿಶೇಷವಾಗಿ ನಗರದ ರೋಟರಿ ವೃತ್ತದಲ್ಲಿ 150 ಅಡಿ ಎತ್ತರದ ಧ್ವಜಸ್ತಂಬದ ಮೇಲೆ ತ್ರಿವರ್ಣ ಧ್ವಜ ಹಾರಿಸಲಾಯಿತು.

ಬಳ್ಳಾರಿ ಉಸ್ತುವಾರಿ ಸಚಿವ ಆನಂದ್ ಸಿಂಗ್ ಧ್ವಜಾರೋಹಣ ನೆರವೇರಿಸಿದರು. ಜನರ ಸಹಕಾರ ಮತ್ತು ದೇಶಾಭಿಮಾನದಿಂದ ಇಂದು ಹೊಸಪೇಟೆಯಲ್ಲಿ ಬೃಹತ್ ಧ್ವಜಸ್ತಂಬ ನಿರ್ಮಿಸಲು ಕಾರಣ ಎಂದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಕ್ಕಾಗಿ ತ್ಯಾಗ ಬಲಿದಾನಗಳನ್ನು ಅರ್ಪಿಸಿದ ಹುತಾತ್ಮರನ್ನು ಸ್ಮರಿಸಲಾಯಿತು.

-ಅರುಣ್ ನವಲಿ

RELATED ARTICLES

Related Articles

TRENDING ARTICLES