Sunday, January 19, 2025

ಜೂ. ಸ್ಟೈಯ್ನ್​​ ಖ್ಯಾತಿಯ ಕ್ರಿಕೆಟಿಗ ಕರಣ್ ತಿವಾರಿ ಆತ್ಮಹತ್ಯೆ

ಮುಂಬೈ : ಯುವ ಕ್ರಿಕೆಟಿಗ, ಮುಂಬೈ ರಣಜಿ ತಂಡಕ್ಕೆ ನೆಟ್ಸ್​​​ನಲ್ಲಿ ಬೌಲಿಂಗ್​ ಮಾಡುತ್ತಿದ್ದ ಕರಣ್ ತಿವಾರಿ (25) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪೂರ್ವ ಗೋರೆಗಾಂವ್​​ನ ಗೋಕುಲ ನಗರದಲ್ಲಿರುವ ತಮ್ಮ ನಿವಾಸದಲ್ಲಿ ತಿವಾರಿ ಸೋಮವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಕತ್ಯೆಗೆ ಮಾಡಿಕೊಂಡಿದ್ದಾರೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ವರದಿಯಾಗಿದೆ.

ದಕ್ಷಿಣ ಆಫ್ರಿಕಾದ ವೇಗಿ ಡೇಲ್​ ಸ್ಟೈಯ್ನ್​​ ಶೈಲಿಯಲ್ಲಿ ಕರಣ್ ಬೌಲಿಂಗ್​ ಮಾಡುತ್ತಿದ್ದರು. ವಾಂಖೆಡೆ ಕ್ರೀಡಾಂಗಣದಲ್ಲಿ ಕಳೆದ ವರ್ಷ ಹಲವು ತಂಡಗಳಿಗೆ ನೆಟ್​ ಬೌಲರ್ ಆಗಿ ಕರಣ್ ತಿವಾರಿ ಕಾರ್ಯನಿರ್ವಹಿಸಿದ್ದರು.

ಅವಕಾಶಗಳ ಕೊರತೆ,  IPLನಲ್ಲಿ ಚಾನ್ಸ್ ಸಿಗದಿರುವುದು ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಕುರಾರ್​ ಪೊಲೀಸ್​ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES