Tuesday, January 21, 2025

ಆ್ಯಂಬುಲೆನ್ಸ್ ಸಿಗದೆ ಕೊರೋನಾಗೆ ಶಿಕ್ಷಕ ಬಲಿ

ಚಿತ್ರದುರ್ಗ :  ಜಿಲ್ಲೆಯ ಮೊಳಕಾಲ್ಮೂರು ತಾಲ್ಲುಕಿನಲ್ಲಿ ಸಕಾಲಕ್ಕೆ ಆ್ಯಂಬುಲೆನ್ಸ್​ ಸಿಗದ ಕಾರಣ ಕೊರೊನಾ ಸೋಂಕಿಗೆ ತುತ್ತಾಗಿದ್ದ ಮುಖ್ಯ ಶಿಕ್ಷಕ ಮೃತಪಟ್ಟಿದ್ದಾರೆ .

ಮೊಳಕಾಲ್ಮೂರು ಪಟ್ಟಣದ 62 ವರ್ಷದ ಶಿಕ್ಷಕ ತೀರ್ವ ಉಸಿರಾಟ ಸಮಸ್ಯೆಯಿಂದ ಬಳಲಿ ಮೃತ ಪಟ್ಟಿದ್ದಾರೆ. ಶಿಕ್ಷಕಗೆ ನಿನ್ನೆ ಬೆಳಗ್ಗೆ ಕೊರೋನಾ ಸೋಂಕು ಇರುವುದು ಧೃಡವಾಗಿತ್ತು, ಆದರೆ ಮಧ್ಯಾಹ್ನ 2 ಗಂಟೆಯಾದರು ಆ್ಯಂಬುಲೆನ್ಸ್​ ಬಂದಿರಲಿಲ್ಲ. ಸ್ಥಳಕ್ಕೆ ಆ್ಯಂಬುಲೆನ್ಸ್​ ಬಂದ ಬಳಿಕವೂ ಸುಮಾರು ಗಂಟೆಗೂ ಹೆಚ್ಚು ಕಾಲ ವಿಳಂಬ ಮಾಡಿದ್ದರಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಸಿಬ್ಬಂದಿ ಹಾಗೂ ಚಾಲಕನ ವಿರುದ್ಧ ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮೃತ ಶಿಕ್ಷಕ ತೀವ್ರ ಜ್ವರ, ಕೆಮ್ಮು, ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಕೊನೆಗೆ ಆ್ಯಂಬುಲೆನ್ಸ್​ನಲ್ಲಿ ನರಳಿ ನರಳಿ ಜೀವ ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.  ಸ್ಥ

RELATED ARTICLES

Related Articles

TRENDING ARTICLES