ಮೈಸೂರು : ಮೈಸೂರಿನ ವಿವಿ ಕ್ಯಾಂಪಸ್ ನಲ್ಲಿ ಇನ್ಮುಂದೆ ಅಹಿತಕರ ಘಟನೆಗಳು ನಡೆಯೋ ಹಾಗಿಲ್ಲ. ಯಾಕಂದ್ರೆ ನಿಮ್ಮ ಮೇಲೆ ಇಡಲಾಗುತ್ತದೆ ಹದ್ದಿನಕಣ್ಣು. ಹಾಗೇನಾದ್ರೂ ಬೆಳವಣಿಗೆ ಆದರೆ ಇಮ್ಮಿಡಿಯೆಟ್ ಆಗಿ ದಾಖಲಿಸುತ್ತೆ ನಿಮ್ಮೆಲ್ಲಾ ಚಲನವಲನಗಳು. ವಿಧ್ಯಾರ್ಥಿಗಳ ಹಾಗೂ ವಿವಿ ಕ್ಯಾಂಪಸ್ ಸುರಕ್ಷತೆಗಾಗಿ ಕಾರ್ಯನಿರ್ವಹಿಸಲಿವೆ ಸಿಸಿ ಕ್ಯಾಮರಾಗಳು. ಇನ್ಮೇಲೆ ಶಿಸ್ತು ಬಿಟ್ಟು ಹೋದರೆ ಎದುರಿಸಬೇಕಾಗುತ್ತದೆ ಶಿಸ್ತಿನ ಕ್ರಮ..
ಮೈಸೂರು ವಿವಿ ಕ್ಯಾಂಪಸ್ ನಲ್ಲಿ ಫ್ರೀ ಕಾಶ್ಮೀರ್ ಪೋಸ್ಟರ್ ಪ್ರದರ್ಶಿಸಿದ ನಳಿನಿ ಪ್ರಕರಣ ಸಂಭಂಧಪಟ್ಟವರ ನಿದ್ರೆ ಕೆಡಿಸಿದ್ದು ನಿಜ. ಈ ಪ್ರಕರಣ ಎಲ್ಲರನ್ನೂ ಬಡಿದೆಬ್ಬಿಸುವಂತೆ ಮಾಡಿದೆ. ಇಂತಹ ಘಟನೆಗಳಿಗೆ ಮೂಗುದಾರ ಹಾಕಲು ಮೈಸೂರು ವಿವಿ ಸ್ಟೆಪ್ ತೆಗೆದುಕೊಂಡಿದೆ. ಕ್ಯಾಂಪಸ್ ನಲ್ಲಿ ಇನ್ನು ಮುಂದೆ ಕಿಡಿಗೇಡಿಗಳ ಆಟ ನಡೆಯಲ್ಲ. ಕಳ್ಳಾಟ ಆಡಿದ್ರೆ ಸಿಕ್ಕಿಬೀಳೋದು ಗ್ಯಾರೆಂಟಿ. ಯಾಕೆಂದರೆ ಕ್ಯಾಂಪಸ್ ಗೆ ಎಂಟ್ರಿ ಕೊಡುವ ಪ್ರತಿಯೊಬ್ಬರ ಮೂವ್ ಮೆಂಟ್ ರೆಕಾರ್ಡ್ ಆಗುತ್ತದೆ. ಮೈಸೂರು ವಿವಿ ಕ್ಯಾಂಪಸ್ ನಲ್ಲಿ 730 ಕ್ಯಾಮರಾಗಳು ಪ್ರತಿಯೊಬ್ಬರ ಚಲನವಲನಗಳನ್ನ ಚಿತ್ರೀಕರಿಸುತ್ತೆ.
ಮೈಸೂರು ವಿವಿ ಕ್ಯಾಂಪಸ್ ನಲ್ಲಿ ಇದೀಗ ಹೆಜ್ಜೆ ಹೆಜ್ಜೆಯಲ್ಲೂ ಸಿಸಿ ಕ್ಯಾಮರಾ ಕಂಡುಬರುತ್ತಿದೆ. ವಿಧ್ಯಾರ್ಥಿಗಳ ಹಾಗೂ ಕ್ಯಾಂಪಸ್ ನ ಸುರಕ್ಷತೆಗಾಗಿ ಇಂತಹ ಬೆಳವಣಿಗೆ ಆಗಿದೆ. ಕ್ಯಾಂಪಸ್ ನಲ್ಲಿ ಇತ್ತೀಚೆಗೆ ನಡೆದ ಕೆಲವು ಕಹಿ ಘಟನೆಗಳು ಪಾಠ ಕಲಿಸಿದೆ. ಅನಗತ್ಯವಾಗಿ ಪ್ರತಿಭಟನೆಗಳು, ಫ್ರೀ ಕಾಶ್ಮೀರ್ ಪೋಸ್ಟರ್ ಪ್ರದರ್ಶನ, ಅಪಘಾತ ಹೀಗೆ ಹತ್ತಾರು ಪ್ರಕರಣಗಳು ಕ್ಯಾಂಪಸ್ ಮೇಲೆ ಭಾರಿ ಪರಿಣಾಮ ಬೀರಿತ್ತು. ಇಂತಹ ಪ್ರಕರಣಗಳಿಗೆ ಬ್ರೇಕ್ ಹಾಕಬೇಕಂತಲೇ ಇಂಟಲಿಜೆಂಟ್ ವಿಡಿಯೋ ಸರ್ವೆಲೆಂಟ್ ವ್ಯವಸ್ಥೆಗೆ ಮೊರೆ ಹೋಗಲಾಗಿದೆ. ಕ್ಯಾಂಪಸ್ ನಲ್ಲಿ 730 ಸಿ.ಸಿ.ಕ್ಯಾಮರಾಗಳನ್ನ ಅಳವಡಿಸಲಾಗಿದೆ. ಗುಂಪು ಸೇರಿದ್ರೆ ಸಾಕು ಅಲರ್ಟ್ ಮಾಡುವ ಸಿಸ್ಟಂ ಇದ್ರಲ್ಲಿದೆ. ಕ್ಯಾಂಪಸ್ ಗೆ ಯಾರೇ ಎಂಟ್ರಿ ಕೊಡ್ಲಿ ಅಥವ ಎಕ್ಸಿಟ್ ಆಗ್ಲಿ ರೆಕಾರ್ಡ್ ಆಗುತ್ತೆ. ಎಲ್ಲಾ ಕ್ಯಾಮರಾಗಳನ್ನ ಮಾನಿಟರ್ ಮಾಡಲು ಡಾಟಾ ಸೆಂಟರ್ ಸಹ ಸಜ್ಜಾಗುತ್ತಿದೆ. ತಲಾ 120 ಕ್ಯಾಮರಾಗಳ ದೃಶ್ಯಗಳನ್ನ ಪರಿಶೀಲನೆ ಮಾಡುವ 6 ಬೃಹತ್ ಪರದೆಗಳು ಸಿದ್ದವಾಗುತ್ತಿದೆ. 3.5 ಕೋಟಿ ವೆಚ್ಚದಲ್ಲಿ ಅಳವಡಿಸಲಾದ ಇಂಟಲಿಜೆಂಟ್ ವಿಡಿಯೋ ಸರ್ವಿಲೆಂಟ್ ಇನ್ನು 15 ದಿನಗಳಲ್ಲಿ ಕಾರ್ಯಾಚರಣೆ ಆರಂಭಿಸಲಿದೆ
ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಆರಂಭವಾದ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ವಿಧ್ಯಾರ್ಥಿಗಳ ಸುರಕ್ಷತೆಗಾಗಿ ತೆಗೆದುಕೊಂಡ ಕ್ರಮ ಸ್ವಾಗತಾರ್ಹ. ಮೈಸೂರು ವಿವಿ ಇಟ್ಟ ಈ ಹೆಜ್ಜೆಗೆ ವಿಧ್ಯಾರ್ಥಿಗಳೂ ಸಹ ಫಿದಾ ಆಗಿದ್ದಾರೆ.
ಮೈಸೂರು ವಿವಿ ಯಲ್ಲಿ 7 ಸಾವಿರ ವಿಧ್ಯಾರ್ಥಿಗಳಿದ್ದಾರೆ. ಎಲ್ಲರ ಮೇಲೆ ನಿಗಾ ಇಡುವುದು ಸುಲಭದ ಕೆಲಸವಲ್ಲ. ಜೊತೆಗೆ ಅಪರಿಚಿತರ ಮೇಲೂ ಹದ್ದಿನ ಕಣ್ಣಿಡಬೇಕಾಗುತ್ತೆ. ಈ ಹಿನ್ನಲೆ ಸಿಸಿ ಕ್ಯಾಮರಾ ಅಳವಡಿಕೆ ಉತ್ತಮ ಕಾರ್ಯ ಎಂದೇ ಹೇಳಬಹುದಾಗಿದೆ. ರಾಜ್ಯದಲ್ಲೇ ಮೊದಲ ಪ್ರಯತ್ನವಾದ ಈ ವ್ಯವಸ್ಥೆ ಸಕ್ಸಸ್ ಆಗಲೆಂಬುದು ಎಲ್ಲರ ಆಶಯವಾಗಿದೆ…