ತುಮಕೂರು: ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಜನಕಲೋಟಿ ಕುಗ್ರಾಮದ ಲಕ್ಷ್ಮೀಕಾಂತ್ ಸದ್ಯ ಕೊರಟಗೆರೆ ತಾಲ್ಲೂಕಿನ ಕುರಂಕೋಟೆ ಗ್ರಾಮದ ಗ್ರಾಮ ಪಂಚಾಯಿತಿ ಸಿ ದರ್ಜೆ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೆಎಎಸ್ ಪರೀಕ್ಷೆ ಬರೆಯಲು ಸಿದ್ದತೆ ನಡೆಸಿದ್ದಾರೆ, ಆದ್ರೆ ಕರೋನಾ ಸಂಕಷ್ಟದಲ್ಲಿ ಕರೋನಾ ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವುದರಿಂದ ಓದಲು ಸಾಧ್ಯವಾಗಿಲ್ಲ ಹಾಗಾಗಿ ಒಂದು ತಿಂಗಳ ಕಾಲ ಕೆ.ಎ.ಎಸ್ ಪರೀಕ್ಷೆ ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಕನ್ನಡದಲ್ಲಿ ಪತ್ರ ಬರೆದಿದ್ದಾರೆ.
ಸದ್ಯ ಪ್ರಧಾನಿ ಮೋದಿ ಕಚೇರಿ ತಲುಪಿರುವ ಲಕ್ಷ್ಮೀಕಾಂತ್ ಅವರ ಪತ್ರಕ್ಕೆ ಉತ್ತರ ಸಿಗಬೇಕಾಗಿದೆ. ಈ ನಡುವೆ ಪವರ್ ಟಿವಿಯೊಂದಿಗೆ ಮಾತನಾಡಿದ ಸಿ ದರ್ಜೆ ನೌಕರ ಲಕ್ಷ್ಮೀಕಾಂತ್ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಪರೀಕ್ಷೆ ಮುಂದೂಡಬೇಕು ಇಲ್ಲವೇ ಕೆ.ಎ.ಎಸ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಕಾಲ ರಜೆಯನ್ನ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.
-ಹೇಮಂತ್ ಕುಮಾರ್