Sunday, December 22, 2024

ಕೋಳಿ ಫಾರಂ ಮಾಲೀಕರ ನಿರ್ಲಕ್ಷ್ಯದಿಂದ ನೊಣದ ಹಾವಳಿ

ಚಿತ್ರದುರ್ಗ: ಜಿಲ್ಲೆಯ ದಂಡಿನ ಕುರುಬರ ಹಟ್ಟಿ ಗ್ರಾಮದ ಹೊರ ವಲಯದಲ್ಲಿ ಇರೋ ಕೋಳಿ ಫಾರಂ ನಿಂದಾಗಿ ಗ್ರಾಮದಲ್ಲಿ ನೊಣಗಳ ಹಾವಳಿ ಹೆಚ್ಚಾಗಿದೆ.ಇದಕ್ಕೆ ಕಾರಣ ಕೋಳಿ ಪಾರಂ ಮಾಲೀಕರ ನಿರ್ಲಕ್ಷ್ಯ ಎಂದು ಗ್ರಾಮಸ್ಥರು ಆರೋಪ ಮಾಡಿದ್ದರು ಈ ಬಗ್ಗೆ ಪವರ್ ಟಿವಿ ಸಮಗ್ರವಾಗಿ ಸುದ್ದಿಯನ್ನ ಬಿತ್ತರಿಸಿತ್ತು.

ಇನ್ನು ಸುದ್ದಿ ಬಿತ್ತರಿಸಿದ ಬೆನ್ನಲ್ಲಿ ಚಿತ್ರದುರ್ಗ ತಾಲ್ಲೂಕಿನ ಇ.ಓ ಕೃಷ್ಣ ನಾಯಕ್​ ಕೋಳಿ ಫಾರಂಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ಇನ್ನೂ ಪರಿಶೀಲನೆ ವೇಳೆ ಕೋಳಿ ಫಾರಂನ ತ್ಯಾಜ್ಯ ಹಾಗು ಕೋಳಿ ಗೊಬ್ಬರವನ್ನ ಸರಿಯಾಗಿ ವಿಲೇವಾರಿ ಮಾಡದೆ ಇರೋದು  ನಾಯಕ್​ರವರ ಗಮನಕ್ಕೆ ಬಂದಿದೆ.ಹಾಗಾಗಿ ನೊಣಗಳ ಹಾವಳಿ ಹೆಚ್ಚಾಗಿದೆ ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯನ್ನು ಮನಗಂಡ  ನಾಯಕ್ ಪಾರಂ ಮಾಲೀಕರಿಗೆ ನೋಟಿಸ್ ನೀಡಲು ಗ್ರಾಮ ಪಂಚಾಯತಿ ಪಿಡಿಓಗೆ ಸೂಚನೆ ನೀಡಿದ್ದಾರೆ. ಇನ್ನೂ ನೋಟಿಸ್​ಗೆ ಸ್ಪಂದಿಸದೆ ಇದ್ದಲ್ಲಿ ಕಾನೂನು ಕ್ರಮ ಕೈ ಗೊಳ್ಳವ ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES