Tuesday, January 21, 2025

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮೊದಲ‌ ಕೊರೋನ ಕೇರ್ ಸೆಂಟರ್ ಉದ್ಘಾಟನೆ

ಬೆಂಗಳೂರು : ಈಗಾಗಲೇ ದೇಶಾದ್ಯಂತ ಕೊರೋನ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಬರುತ್ತಿದೆ ಹಾಗಾಗಿ ರಾಜ್ಯ ಸರಕಾರ ಎಲ್ಲಾ ಕಡೆ ಕೊರೋನ ಕೇರ್ ಸೆಂಟರ್ ಗಳನ್ನು ನಿರ್ಮಿಸುತ್ತಿದ್ದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮೊದಲ ಕೊರೋನ ಕೇರ್ ಸೆಂಟರ್ ಅನ್ನು ಇಂದು ಜಿಗಣಿಯಲ್ಲಿ ಉದ್ಘಾಟನೆ ಮಾಡಲಾಯಿತು. ಬೆಂಗಳೂರು ದಕ್ಷಿಣ ಶಾಸಕ ಎಂ ಕೃಷ್ಣಪ್ಪ, ಕೇರ್ ಸೆಂಟರ್ ಉದ್ಘಾಟಿಸಿ ಎಲ್ಲಾ ವ್ಯವಸ್ಥೆಗಳು ಸರಿಯಾಗಿದೆಯೆ ಎಂದು ಪರಿಶೀಲನೆ ನಡೆಸಿದರು ಇನ್ನು ಈ ಕೊರೋನ ಕೇರ್ ಸೆಂಟರ್ ನಲ್ಲಿ ಪಾಸಿಟಿವ್ ಬಂದಿರುವ ಸೋಂಕಿತರಿಗೆ ಹಾಗೂ ಟೆಸ್ಟ್ ಮಾಡಿಸಿ ಕಾಯುತ್ತಿರುವ ಶಂಕಿತರಿಗೂ ಸಹ ಉಳಿದುಕೊಳ್ಳುವ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಸೆಂಟರ್ ನಲ್ಲಿ ಮಾಡಿದ್ದು ಜಿಗಣಿ ಸರಕಾರಿ ಬಾಲಕರ ಹಾಸ್ಟೆಲನ್ನು ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ.. ಇನ್ನು ಎಡಿಎಸ್ಪಿ ಲಕ್ಷ್ಮಿ ಗಣೇಶ್ ಹಾಗು ಡಿವೈಎಸ್ಪಿ ನಂಜುಂಡೇ ಗೌಡ ಅವರು ಸಹ ಶಾಸಕ ಕೃಷ್ಣಪ್ಪ ಅವರ ಜೊತೆ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದು ಅವರ ಜೊತೆ ವಯೋವೃದ್ಧರಿಂದ ರಿಬ್ಬನ್ ಕಟ್ ಮಾಡಿಸಿ ಉದ್ಘಾಟನೆ ಮಾಡಿಸಿದ್ದು ವಿಶೇಷವಾಗಿತ್ತು. ಇದೇ ಸಮಯದಲ್ಲಿ ಮಾತನಾಡಿದ ಶಾಸಕ ಎಂ ಕೃಷ್ಣಪ್ಪ ಜಿಗಣಿ ಕೈಗಾರಿಕಾ ಪ್ರದೇಶವಾಗಿದ್ದು ಈಗ ರಿಪೋರ್ಟ್ 24 ಗಂಟೆಯೊಳಗೆ ಬರುವ ರೀತಿಯ ವ್ಯವಸ್ಥೆಗಳನ್ನು ಮಾಡಲಾಗ್ತಾ ಇದೆ. ರಿಪೋರ್ಟ್ ಬರುವವರೆಗೆ ಅವರು ಹೊರ ಓಡಾಡುವುದಕ್ಕಿಂತ ಇಲ್ಲಿ ಇರೋದು ಒಳ್ಳೆಯದು ಜೊತೆಗೆ ಕೊರೋನಾ ಪಾಸಿಟೀವ್ ಇರುವವರಿಗೆ ಸಹ ಇಲ್ಲಿ ಕರೆತರಲು ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಅದೇ ರೀತಿ ಎಲ್ಲ ಡಾಕ್ಟರ್ ಗಳು ವೈದ್ಯಕೀಯ ಸಿಬ್ಬಂದಿ ಹಾಗು ಪೋಲೀಸರು ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಇನ್ನು ಖಾಸಗಿ ಆಸ್ಪತ್ರೆಗಳ ಸುಲಿಗೆ ವಿಚಾರವಾಗಿ ಅಂತಹ ಘಟನೆ ಎಲ್ಲೆ ನಡೆದರು ಸಹ ಮೊದಲೇ ಸಂಭಂದಿಸಿದ ಅಧಿಕಾರಿಗಳು ಹಾಗು ನಮ್ಮ ಗಮನಕ್ಕೆ ತಂದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಜೊತೆಗೆ ತಮಿಳುನಾಡು ಗಡಿ ಪಕ್ಕದಲ್ಲೆ ಇದ್ದು ಕೈಗಾರಿಕಾ ಪ್ರದೇಶಕ್ಕೆಂದು ಬಂದವರು ಯಾರೆಂದು ತಿಳಿಯುವುದು ಕಷ್ಟ ಆದರೆ ಇನ್ನು ಆದಷ್ಟು ಬೇಗ ಕೊರೋನಾ‌ ನಿಯಂತ್ರಣಕ್ಕೆ ತರುತ್ತೇವೆಂದು ತಿಳಿಸಿದರು. ಇನ್ನ ಕೆಜೆ ಹಳ್ಳಿ ಗಲಬೆ ವಿಚಾರದಲ್ಲಿ ಸರಕಾರ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ರಘು, ಆನೇಕಲ್‌, ಪವರ್ ಟಿವಿ

RELATED ARTICLES

Related Articles

TRENDING ARTICLES