Wednesday, January 22, 2025

ಅನಂತ್​ ಕುಮಾರ್ ಹೆಗಡೆ BSNL ಉದ್ಯೋಗಳಲ್ಲಿ ಕ್ಷಮೆ ಕೇಳ್ಬೇಕು : ಕಾಂಗ್ರೆಸ್ ಆಗ್ರಹ

ಶಿವಮೊಗ್ಗ: BSNL ಸಂಸ್ಥೆ ಮತ್ತು ಅದರ ನೌಕರರ ಬಗ್ಗೆ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವಹೇಳನ ಮಾಡಿರುವುದನ್ನು ಖಂಡಿಸಿ ಇಂದು ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.  ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಅನಂತ್ ಕುಮಾರ್ ಹೆಗಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

BSNLನ್ನು ಬಂಡವಾಳ ಹೂಡಿಕೆ ಸಂಸ್ಥೆಗಳ ಪಟ್ಟಿಯಿಂದ ಕೈ ಬಿಟ್ಟು ಖಾಸಗೀಕರಣ ಮಾಡುವ ಬಗ್ಗೆ ಅನಂತ್ ಕುಮಾರ ತಿಳಿಸಿದ್ದರು. ಹಾಗೂ ಸರ್ಕಾರ ಎಲ್ಲಾ ವ್ಯವಸ್ಥೆ ನೀಡಿದ್ದರೂ ಅಲ್ಲಿನ ಸಿಬ್ಬಂದಿ ಕೆಲಸ ಮಾಡುತ್ತಿಲ್ಲ, ದೇಶದ್ರೋಹಿಗಳೇ ತುಂಬಿರುವ ಸಂಸ್ಥೆಯಾಗಿದೆ, ಅಲ್ಲದೆ ಇರುವ 85 ಸಾವಿರ ಜನರನ್ನು ಕೆಲಸದಿಂದ ತೆಗೆದು, ಸಂಸ್ಥೆಯನ್ನು ಖಾಸಗೀಕರಣ ಮಾಡುವ ಬಗ್ಗೆ ಹೇಳಿಕೆ ನೀಡುವ ಮೂಲಕ ಅನಂತ್ ಕುಮಾರ್ ಹೆಗಡೆ ಬೆದರಿಕೆ ಒಡ್ಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಆಪಾದಿಸಿದ್ದಾರೆ.

ಟೆಲಿಕಾಮ್​ ಸೇವಾ ಕ್ಷೇತ್ರದಲ್ಲಿ , ದಶಕಗಳ ಕಾಲ ದೇಶದಲ್ಲಿ ಸೇವೆ ಸಲ್ಲಿಸಿದ BSNL ಸಂಸ್ಥೆಯ ಸಿಬ್ಬಂದಿ ದೇಶದ್ರೋಹಿಗಳೆಂದು ಕರೆದಿರುವ ಅನಂತ್ ಕುಮಾರ್ ಆ ಉದ್ಯೋಗಿಗಳಲ್ಲಿ ಕ್ಷಮೆ ಕೋರಬೇಕು. ಜೊತೆಗೆ ಸಂಸ್ಥೆಯನ್ನು ಖಾಸಗಿಕರಣ ಮಾಡುವ ಯೋಚನೆ ಕೈ ಬಿಟ್ಟು, ಸಂಸ್ಥೆ ಮತ್ತು ನೌಕರರನ್ನು ಉಳಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಉಪಾಧ್ಯಕ್ಷ ಶರತ್ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES