Wednesday, January 22, 2025

ಉಗ್ರ ಸಂಘಟನೆಗಳ ಪುಂಡರ ಕೃತ್ಯ ಖಂಡನೀಯ : ಸಿ.ಸಿ.ಪಾಟೀಲ

ಗದಗ: ಬೆಂಗಳೂರು ಡಿ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಕಾರಣವಾಗಿರೋ ಕೆಲವು ಉಗ್ರ ಸಂಘಟನೆಗಳ ಪುಂಡರ ಕೃತ್ಯ ಖಂಡನೀಯ ಅಂತ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ. ಗದಗ ಜಿಲ್ಲೆಯ ನರಗುಂದದ ತಮ್ಮ ನಿವಾಸದಲ್ಲಿ ಈ ಕುರಿತು ಹೇಳಿಕೆ ನೀಡಿರೋ ಅವರು, ಇಂಥಹ ಪುಂಡಾಟಿಕೆಗೆ ಬಿಜೆಪಿ ಸರ್ಕಾರ ಯಾವತ್ತೂ ಅವಕಾಶ ನಿಡೋದಿಲ್ಲ.

ಪುಂಡರು ಶಾಸಕರ ಮನೆ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿರುವುದು ಅತ್ಯಂತ ಖಂಡನಾರ್ಹವಾದದ್ದು‌ ಅಂತ ಹೇಳಿದ್ರು. ಈ ವಿರುದ್ಧ ಶೀಘ್ರದಲ್ಲೆ ಕಾನೂನು ಕ್ರಮ‌ ಜರುಗಿಸಲಾಗುತ್ತೆ.ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಇನ್ನು ಗಲಭೆಗೆ ಕಾರಣಕರ್ತರಾದ ಇನ್ನೂ ಕೆಲವರನ್ನ ಶೀಘ್ರದಲ್ಲೆ ಬಂಧಿಸಲಾಗುತ್ತೆ ಅಂತಾ ತಿಳಿಸಿದ್ರು. ಇಂಥ ಪುಂಡರಿಗೆ ಉಗ್ರವಾದ ಶಿಕ್ಷೆಯನ್ನು ಕಾನೂನಾತ್ಮಕವಾಗಿ ನೀಡಲಾಗುತ್ತೆ.ಅಲ್ಲದೇ ಇದೇ ವೇಳೆ ಮಾಧ್ಯಮದವರ ಮೇಲೂ ಹಲ್ಲೆ ಮಾಡಿರುವುದು ಖಂಡನಿಯ ಅಂತಾ‌ ಪಾಟೀಲ ಕಿಡಿ‌ ಕಾರಿದ್ರು.

RELATED ARTICLES

Related Articles

TRENDING ARTICLES