ಶಿವಮೊಗ್ಗ: ಬೆಂಗಳೂರು ಗಲಭೆ ಸಂಬಂಧ ವಿಪಕ್ಷ ನಾಯಕ ಸಿದ್ಧರಾಮಯ್ಯ ಟ್ವೀಟ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ ಕಾರಿದ್ದಾರೆ.
ಹಿಂದೂ ಗುರುಗಳು, ಮುಸ್ಲಿಂ ಹಿರಿಯರು ಶಾಂತಿ ಸ್ಥಾಪನೆಗೆ ಪ್ರಯತ್ನ ಮಾಡಿ ಎಂದು ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದು, ಇಂತಹ ಹೇಳಿಕೆ ಕೊಡುವುದಕ್ಕೆ ಸಿದ್ಧರಾಮಯ್ಯಗೆ ನಾಚಿಕೆಯಾಗಬೇಕು. ಈ ಹೇಳಿಕೆ ನೀಡಿದ್ದಕ್ಕೆ ಸಿದ್ಧರಾಮಯ್ಯ ಕ್ಷಮೆ ಕೋರಲಿ ಅಂತಾ ಈಶ್ವರಪ್ಪ ಆಗ್ರಹಿಸಿದ್ದಾರೆ. ಮುಸಲ್ಮಾನ್ ಗೂಂಡಾಗಳನ್ನು ಬಂಧಿಸಿ ಎಂದು ಒಂದೇ ಒಂದು ಹೇಳಿಕೆ ನೀಡಿಲ್ಲ. ಯಾರು ಗಲಭೆಕೋರರಿದ್ದಾರೋ ಅವರನ್ನು ಬಂಧಿಸಲಿ ಎಂದು ಟ್ವೀಟ್ ಮಾಡಬೇಕಿತ್ತು. ಅದರ ಬದಲು ಹಿಂದೂ ಮತ್ತು ಮುಸಲ್ಮಾನ್ ಹಿರಿಯರು ಶಾಂತಿ ಸ್ಥಾಪನೆಗೆ ಮುಂದಾಗಬೇಕೆಂದು ಹೇಳಿಕೆ ನೀಡಿದ್ದಾರೆ.
ಕೆ.ಜಿ ಹಳ್ಳಿ ಗಲಭೆ : SDPI ಮುಖಂಡ ಮುಜಾಮಿಲ್ ಪಾಷಾ ಅರೆಸ್ಟ್
ಸಿದ್ಧರಾಮಯ್ಯಗೆ ಮುಸಲ್ಮಾನ ಗೂಂಡಾಗಳ ಬಗ್ಗೆ ಒಂದೇ ಒಂದು ಮಾತು ಹೇಳುವ ಧೈರ್ಯ ಇಲ್ಲ. ಅವರಿಗೆ ಮುಸಲ್ಮಾನರ ಓಟು ಹೋಗುವ ಭಯ ಇದೆ. ಈ ಕಾರಣದಿಂದಾಗಿಯೇ ಸಿದ್ಧರಾಮಯ್ಯ, ಮುಸಲ್ಮಾನರ ವಿರುದ್ಧ ಹೇಳಿಕೆ ನೀಡುತ್ತಿಲ್ಲ ಎಂದು ಈಶ್ವರಪ್ಪ ಕಿಡಿ ಕಾರಿದ್ದಾರೆ. ಇದೇ ಘಟನೆಯನ್ನ ಹಿಂದೂ ಸಂಘಟನೆಯವರೇನಾದರೂ ಮಾಡಿದ್ದರೆ, ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡುತ್ತಿದ್ದರಾ ಅಂತಾ ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯಗೆ ಈ ಘಟನೆ ಖಂಡಿಸುವಂತಹ ಧೈರ್ಯ ಕೂಡ ಇಲ್ಲ ಎಂದು ಈಶ್ವರಪ್ಪ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
ಕೆ.ಜಿ ಹಳ್ಳಿ ಗಲಭೆ : ಕಠಿಣ ಕ್ರಮಕ್ಕೆ ಸಿಎಂ ಖಡಕ್ ಸೂಚನೆ
ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ; ಹೊತ್ತಿ ಉರಿದ ಬೆಂಗಳೂರಿನ ಕೆ.ಜಿ ಹಳ್ಳಿ , ಡಿ.ಜೆ ಹಳ್ಳಿ..!