ಬಾಗಲಕೋಟೆ: ಜಿಲ್ಲೆಯ ಮುಧೋಳ ತಿಮ್ಮಾಪುರದ ರನ್ನ ಶುಗರ್ ಕಾರ್ಖಾನೆ ರೈತರಿಂದಲೇ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿಕೊಂಡು ರೈತರ ಹಿತಕಾಪಾಡಿಕೊಂಡು ಬಂದಿತ್ತು. ಪ್ರತಿವರ್ಷ ರೈತರ ಹಿತ ಕಾಪಾಡಿಕೊಂಡು ಬರ್ತಿತ್ತು.
ಆದ್ರೆ ಇತ್ತೀಚಿನ ವರ್ಷಗಳಲ್ಲಿ ಆಡಳಿತ ಮಂಡಳಿ ಎಲೆಕ್ಷನ್ ವಿಚಾರವಾಗಿ ಮೇಲಿಂದ ಮೇಲೆ ಆರೋಪ ಕೇಳಿ ಬರುತ್ತಲೇ ಇತ್ತು. ಆದರೆ ಇದೀಗ ಪ್ರಸ್ತುತ ಆಡಳಿತ ಕಾರ್ಖಾನೆಯನ್ನ ಖಾಸಗಿಯವರಿಗೆ ಲೀಸ್ ನೀಡುವ ವಿಚಾರವಾಗಿ ಅಗಸ್ಟ್ 17 ರಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ಕರೆಯಲು ನಿರ್ಧರಿಸಿದ್ದು, ಇದೀಗ ಹಲವು ಮುಖಂಡರ ಕಂಗೆಣ್ಣಿಗೆ ಗುರಿಯಾಗಿದೆ. ಏಕಕಾಲಕ್ಕೆ ಇರುವ 19,500 ಸದಸ್ಯರಿಗೆ ಕಾನ್ಪರೆನ್ಸ್ ಮಾಡೋದು ಹೇಗೆ? ಅವರ ಅಭಿಪ್ರಾಯ ಸಂಗ್ರಹಿಸೋದು ಹೇಗೆ? ಇವೆಲ್ಲಾ ಸಾಧ್ಯವಾಗದೇ ಆಡಳಿತ ಮಂಡಳಿ ಹುನ್ನಾರ ನಡೆಸಿ ರೈತರ ಕಾರ್ಖಾನೆಯನ್ನ ಖಾಸಗಿಯವರಿಗೆ ಲೀಸ್ ನೀಡಲು ಮುಂದಾಗಿದ್ದು, ಇದನ್ನು ತತ್‌ಕ್ಷಣವೇ ರದ್ದುಗೊಳಿಸಬೇಕು ಇಲ್ಲವಾದಲ್ಲಿ ಹೋರಾಟ ಅನಿವಾರ್ಯವೆಂದು ಮುಧೋಳದ ರೈತ ಮುಖಂಡರು ಆಗ್ರಹಿಸಿದ್ದಾರೆ.
ಇನ್ನು ಮುಧೋಳ ಈ ಕಾರ್ಖಾನೆಯಲ್ಲಿ ಕಳೆದ ಹಲವು ವರ್ಷಗಳಿಂದ ರಾಮಣ್ಣ ತಳೇವಾಡ ಅವರ ನೇತೃತ್ವದಲ್ಲಿಯೇ ಆಡಳಿತ ಮಂಡಳಿ ನಡೆಸಿಕೊಂಡು ಬಂದಿದ್ದು, ಇದ್ರಲ್ಲಿ ಸಾಕಷ್ಟು ಗೋಲಮಾಲ್ ನಡೆಸೋ ಮೂಲಕ ರೈತರ ಸಕ್ಕರೆ ಕಾರ್ಖಾನೆ ಇಂದು ಈ ದುಸ್ಥಿತಿಗೆ ಬರಲು ಕಾರಣವೆಂಬ ಆರೋಪಗಳು ಕೇಳಿ ಬರ್ತಿವೆ. ಈ ಮಧ್ಯೆ ಜಿಲ್ಲೆಯಲ್ಲಿರೋ ರೈತರ ಕಾರ್ಖಾನೆಯನ್ನ ಖಾಸಗಿಯವರಿಗೆ ಹೋಗದಂತೆ ನೋಡಿಕೊಳ್ಳುವಂತೆ ಮುಧೋಳದ ಜನ್ರು ತಮ್ಮ ಶಾಸಕರು ಹಾಗೂ ರಾಜ್ಯ ಸರ್ಕಾರದ ಡಿಸಿಎಂ ಆಗಿರುವಂತಹ ಗೋವಿಂದ ಕಾರಜೋಳ ಅವರಿಗೂ ಮೊರೆ ಹೋಗಿದ್ದಾರೆ. ಇದೀಗ ಅಗಸ್ಟ್ 17 ರಂದು ಕರೆದಿರೋ ವಿಡಿಯೋ ಕಾನ್ಪರೆನ್ಸ್ ರದ್ದುಗೊಳಿಸಿ, ಈ ವರ್ಷ ಪ್ಯಾಕ್ಟರಿ ನಡೆಸಿ ಬರುವ ವರ್ಷ ಬೇಕಾದರೆ ಸಭೆ ಕರೆದು ನಿರ್ಧರಿಸಲಿ ಅನ್ನೋದು ಕಾರ್ಖಾನೆ ಸದಸ್ಯರ ಮಾತು.
-ನಿಜಗುಣ ಮಠಪತಿ