ಹಾಸನ : ಜಿಲ್ಲೆಯಲ್ಲಿ ಇಂದು 6 ಮಂದಿ ಕೊರೋನಾ ಸೋಂಕಿಗೆ ಮೃತರಾಗಿದ್ದಾರೆ ಅಲ್ಲದೇ ಹೊಸದಾಗಿ 255 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3986ಕ್ಕೆ ಏರಿಕೆಯಾಗಿದೆ. ಇಂದು ಮೃತಪಟ್ಟವರಲ್ಲಿ ನಾಲ್ವರು ಹಾಸನ ತಾಲ್ಲೂಕಿನವರಾಗಿದ್ದು, 33 ವರ್ಷ, 75 ವರ್ಷದ ಪುರುಷರು ಹಾಗೂ 55 ವರ್ಷ ಮತ್ತು 45 ವರ್ಷದ ಮಹಿಳೆಯರಾಗಿದ್ದಾರೆ. ಅರಕಲಗೂಡು ತಾಲ್ಲೂಕಿನ 67 ವರ್ಷದ ವ್ಯಕ್ತಿ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ 65 ವರ್ಷದ ವ್ಯಕ್ತಿಯೊರ್ವರು ಕೊರೋನಾ ಸೋಂಕಿಗೆ ಒಳಗಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಹಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಇದುವರೆಗೆ 116 ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಸಕ್ರಿಯವಾಗಿ 2,181 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 1688 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 49 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಪತ್ತೆಯಾದ 255 ಕೊರೋನಾ ಸೋಂಕು ಪ್ರಕರಣಗಳಲ್ಲಿ 24 ಜನ ಅರಸೀಕೆರೆ ತಾಲ್ಲೂಕಿನವರು, 35 ಜನ ಚನ್ನರಾಯಪಟ್ಟಣ ತಾಲ್ಲೂಕಿನವರು, ಆಲೂರು ತಾಲ್ಲೂಕಿನಲ್ಲಿ ಇಬ್ಬರು, 112 ಜನ ಹಾಸನ ತಾಲ್ಲೂಕು, 33 ಜನ ಹೊಳೆನರಸೀಪುರ ತಾಲ್ಲೂಕು, ಸಕಲೇಶಪುರ ತಾಲ್ಲೂಕಿನಲ್ಲಿ ಒಬ್ಬರು, 26 ಜನ ಅರಕಲಗೂಡು ತಾಲ್ಲೂಕು, ಬೇಲೂರು ತಾಲ್ಲೂಕಿನ 21 ಜನ ಹಾಗೂ ಹೊರ ಜಿಲ್ಲೆಯವರು ಸೇರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಅವರು ತಿಳಿಸಿದ್ದಾರೆ.
-ಪ್ರತಾಪ್ ಹಿರೀಸಾವೆ