Thursday, January 9, 2025

ಬಿ.ಎಸ್.ವೈ ಆರೋಗ್ಯ ಸುಧಾರಿಸಲಿ, ನಾಡು ಕೊರೋನಾ ಮುಕ್ತವಾಗಲಿ – ಎಂ.ಎಲ್.ಸಿ ಯಿಂದ ವಿಶೇಷ ಪೂಜೆ

ಶಿವಮೊಗ್ಗ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊರೋನಾದಿಂದ ಶೀಘ್ರ ಗುಣಮುಖರಾಗಿದ್ದು, ಅವರ ಆರೋಗ್ಯ ಮತ್ತಷ್ಟು ಸುಧಾರಿಸಲಿ ಎಂದು ಮತ್ತು ನಾಡಿನ ಜನತೆಗೆ ಅವರ ಸೇವೆ ಮತ್ತಷ್ಟು ಸಿಗಲಿ ಎಂದು ಹಾರೈಸಿ, ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡರು ವಿಶೇಷ ಪೂಜೆ ಮತ್ತು ಹೋಮ ನಡೆಸಿದ್ದಾರೆ. ನಗರದ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಈ ಒಂದು ವಿಶೇಷ ಪೂಜೆ ಮತ್ತು ಚಂಡಿಕಾ ಹೋಮ ನೆರವೇರಿಸಲಾಯಿತು.

ಸಿ.ಎಂ ಬಿ.ಎಸ್.ವೈ ಜೊತೆಗೆ ನಾಡಿನ ಎಲ್ಲಾ ಕೊರೋನಾ ಸೋಂಕಿತರು ಬೇಗನೆ ಗುಣಮುಖರಾಗಬೇಕು. ಜನರ ಬದುಕು ಸಹಜ ಸ್ಥಿತಿಗೆ ಬರಬೇಕೆಂದು ಈ ವೇಳೆ ಪ್ರಾರ್ಥಿಸಲಾಯಿತು. ಈ ವೇಳೆ, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಆಯನೂರು ಮಂಜುನಾಥ್, ಸಿ.ಎಂ ಯಡ್ಯೂರಪ್ಪ ಪುತ್ರಿ ಬಿ.ವೈ ಅರುಣಾದೇವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES