ರಾಜ್ಕೋಟ್ : ಈಗಂತು ಎಲ್ಲೆಡೆ ಕರೋನಾದೇ ಸುದ್ದಿ. ಕರೋನಾದಿಂದ ರಕ್ಷಿಸಿಕೊಳ್ಳಬೇಕಾದರೆ ಮಾಸ್ಕ್ ಕಡ್ಡಾಯ ಅಂತ ಸರ್ಕಾವೂ ಹೇಳಿಬಿಟ್ಟಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿಲ್ಲ ಅಂದ್ರೆ ದಂಡ ಕೂಡ ವಿಧಿಸಲಾಗುತ್ತೆ. ಇದು ಕೇವಲ ಸಾಮಾನ್ಯ ಜನರಿಗೆ ಮಾತ್ರವಲ್ಲ, ವಿಐಪಿಗಳಿಗೂ ಅನ್ವಯಿಸುತ್ತೆ. ಇತ್ತೀಚಿಗೆ ಮಾಸ್ಕ್ ಧರಿಸದೇ ಓಡಾಡಿದ್ರು ಅಂತ ಭಾರತೀಯ ಕ್ರಿಕೆಟ್ ನ ಆಲ್ ರೌಂಡರ್ ರವೀಂದ್ರ ಜಡೇಜಾ ಅವರಿಗೂ ದಂಡದ ಬಿಸಿ ತಟ್ಟಿತ್ತು.
ಮೊನ್ನೆ, ತನ್ನ ಪತ್ನಿ ರಿವಾಬಾ ಜೊತೆ ಜಡೇಜಾ ಜಾಲಿ ರೈಡ್ ಅಂತ ಗುಜರಾತ್ನ ರಾಜ್ ಕೋಟ್ನಲ್ಲಿ ಸುತ್ತಾಡುತ್ತಿದ್ದಾಗ, ಪೊಲೀಸರು ತಡೆದಿದ್ದಾರೆ. ಫೇಸ್ ಮಾಸ್ಕ್ ಹಾಕದೇ ಓಡಾಡುತ್ತಿದ್ದರಿಂದ, ಮಹಿಳಾ ಠಾಣೆಯ ಕಾನ್ಸ್ಟೆಬಲ್ ನೀವು ಮಾಸ್ಕ್ ಯಾಕೆ ಧರಿಸಿಲ್ಲ ಅಂತ ಕೇಳಿದ್ದಾರೆ. ಜೊತೆಗೆ ನಿಮ್ಮ ಲೈಸೆನ್ಸ್ ತೋರಿಸಿ ಎಂದಿದ್ದಾರೆ. ಇದಕ್ಕೆ ಕುಪಿತರಾದ ಜಡೇಜಾ ನಾನು ಯಾರು ಅನೋದು ನಿನಗೆ ಗೊತ್ತಿಲ್ವಾ, ನನಗೇ ದಂಡ ವಿಧಿಸ್ತೀಯ ಅಂತ ಕಿರಿಕ್ ಮಾಡಿದ್ದಾರಂತೆ.
ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೇ ಓಡಾಡಿದ್ದು ತಪ್ಪಲ್ವಾ ಅಂತಾ ರಾಜ್ ಕೋಟ್ ಕಿಸನ್ ಪಾರಾ ಚೌಕ್ನ ಮಹಿಳಾ ಕಾನ್ಸ್ಟೆಬಲ್ ಸೋನಲ್ ಗೋಸಾಯ್ ಕೇಳಿದ್ದಾರೆ. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಜಡೇಜಾ ಸೋನಲ್ ಅವರ ಜೊತೆ ವಾಗ್ವಾದಕ್ಕಿಳಿದರಂತೆ.
ನಂತರ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದ ಜಡೇಜಾ, ಸೋನಲ್ ಅವರು ನನ್ನೊಂದಿಗೆ ರೂಡ್ ಆಗಿ ಬಿಹೇವ್ ಮಾಡ್ತಿದ್ದಾರೆ ಎಂದು ದೂರಿದ್ದಾರೆ. ಬಳಿಕ ಅಲ್ಲಿಗೆ ಬಂದ ಹಿರಿಯ ಅಧಿಕಾರಿಯೊಬ್ರು, ಸಮಾಧಾನ ಮಾಡಿ, ದಂಡ ಕಟ್ಟಿಸಿಕೊಳ್ಳದೆ ಕಳುಹಿಸಿ ಕೊಟ್ಟಿದ್ದಾರಂತೆ!
ಈ ಎಲ್ಲಾ ಬೆಳವಣಿಗೆಗಳಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ ಎಂದು ಮಹಿಳಾ ಕಾನ್ಸ್ಟೆಬಲ್ ಸೋನಲ್ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರಂತೆ!