Wednesday, January 22, 2025

ವಿಜಯಪುರ ನಗರದ ರಿಂಗ್ ರೋಡ್ ಬಳಿ ಪೊಲೀಸ್​ ಚೆಕ್ ಪೋಸ್ಟ್​ ನಿರ್ಮಾಣ

ವಿಜಯಪುರ: ನಗರದ ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚೆಕ್ ಪೋಸ್ಟ್ ಒಂದಕ್ಕೆ ಇಂದು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಅನುಪಮ್ ಅಗರವಾಲ್ ಉದ್ಘಾಟನೆ ಮಾಡಿದರು.

ನಗರದ ಪ್ರಮುಖ ರಸ್ತೆಯಾಗಿರುವ  ಮನಗೂಳಿ ರಸ್ತೆಯ ರಿಂಗ್​ ರೋಡ್ ಬಳಿ ಚೆಕ್ ಪೋಸ್ಟ್ ಮಾಡಲಾಗಿದೆ. ಈ ಮಾರ್ಗದ ಮೂಲಕವೇ ವಿಜಯಪುರ ನಗರಕ್ಕೆ ಎಂಟ್ರಿ ಪಡೆಯಬಹುದಾದ ಹಿನ್ನಲೆಯಲ್ಲಿ ನಾಲ್ಕು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇನ್ನೂ ಮುಂಬರುವ ದಿನಗಳಲ್ಲಿ ವಿಜಯಪುರ ನಗರದ ಪ್ರಮುಖ ಸ್ಥಳಗಳಲ್ಲಿ ಸಹಿತ ಈ ರೀತಿಯ ಚೆಕ್ ಪೋಸ್ಟ್ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಅನುಪಮ್ ಅಗರವಾಲ್ ತಿಳಿಸಿದರು. ಇದೇ ಸಂದರ್ಭದಲ್ಲಿ ಡಿವೈಎಸ್​ಪಿ ಲಕ್ಷ್ಮಿನಾರಾಯಣ, ಸಿಪಿಐ ಮೂಕರ್ತಿಹಾಳ, ಪಿಎಸ್​​ಐ ರಾಯಗೊಂಡ ಜನಾರ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES